Home ಜಿಲ್ಲೆ ಮಂಗಳೂರು ಪೆರ್ಮನ್ನೂರು: ಅತಿಕ್ರಮಣ ಮಾಡಿದ ಜಾಗದ ಬೇಲಿ ತೆರವು

ಪೆರ್ಮನ್ನೂರು: ಅತಿಕ್ರಮಣ ಮಾಡಿದ ಜಾಗದ ಬೇಲಿ ತೆರವು

ಉಳ್ಳಾಲ: ನಗರಸಭೆ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಪಿಲಾರು ಮಸೀದಿ ಬಳಿ ಇರುವ ಸರಕಾರಿ ಜಮೀನನ್ನು ತಂತಿ ಬೇಲಿ ಹಾಕಿ ಅತಿಕ್ರಮಣ ಮಾಡಲು ಯತ್ನಿಸಿದ ಘಟನೆ ನಡೆದಿದ್ದು. ಈ ಮಾಹಿತಿ ಪಡೆದ ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಪ್ರಮೋದ್ ಹಾಗೂ ತಂಡ ಶುಕ್ರವಾರ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.
ನಾಗೇಶ್ ಪಿಲಾರ್ ಹಾಗೂ ಕೆಲವರು ಸೇರಿ ಈ ಜಾಗವನ್ನು ತಂತಿ ಬೇಲಿ ಹಾಕಿ ಅತಿಕ್ರಮಣ ಮಾಡಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಅವರ ನಿರ್ದೇಶನದಂತೆ ಕಂದಾಯ ನಿರೀಕ್ಷಿಕ ಪ್ರಮೋದ್ ಉಳ್ಳಾಲ ಹಾಗೂ ಗ್ರಾಮ ಆಡಳಿತಧಿಕಾರಿ ಅಮ್ಜದ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಆಕ್ರಮಣ ಮಾಡಿದ ಜಾಗದ ಬೇಲಿ ತೆರವು ಕಾರ್ಯಾಚರಣೆ ನಡೆಸಿದರು. ಈ ಕೃತ್ಯ ಎಸಗಿದವರ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ದೂರನ್ನು ನೀಡಿದ್ದಾರೆ.