ಪೆಪ್ಪರ್ ಚಿಕನ್

ಬೇಕಾಗುವ ಸಾಮಗ್ರಿಗಳು:

  • ಬೋನ್‌ಲೆಸ್ ಚಿಕನ್ ಕಾಲು ಕೆಜಿ
  • ವಿನಿಗರ್ -೨ ಚಮಚ
  • ಮೊಸರು ಅರ್ಧ ಕಪ್
  • ಹಸಿರು ಮೆಣಸಿನಕಾಯಿ ೩
  • ಕಾಳುಮೆಣಸು ೨
  • ನೀರು ೨೦೦ ೨. ಅ.
  • ಈರುಳ್ಳಿ ೨
  • ಬೆಳ್ಳುಳ್ಳಿ -೨
  • ಅರಿಶಿನ ೧ ಚಮಚ
  • ಎಣ್ಣೆ ೫೦ ಗ್ರಾಂ
  • ಉಪ್ಪು ೨ ಚಮಚ

ಮಾಡುವ ವಿಧಾನ :ಬೌಲಿಗೆ ಬೋನ್‌ಲೆಸ್ ಚಿಕನ್, ವಿನಿಗರ್, ಮೊಸರು ಹಾಕಿ ಮಿಕ್ಸ್ ಮಾಡಿ, ೧೫ ನಿಮಿಷ ನೆನೆಯಲು ಬಿಡಿ. ಪಾತ್ರೆಗೆ ಎಣ್ಣೆ ಹಾಕಿ, ಕಾದ ಎಣ್ಣೆಗೆ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಹಾಕಿ ಬಾಡಿಸಿ. ಇದಕ್ಕೆ ನೆನೆಸಿಟ್ಟುಕೊಂಡ ಚಿಕನ್, ಅರಿಶಿನ, ಉದ್ದವಾಗಿ ಕಟ್ ಮಾಡಿದ ದಪ್ಪ ಮೆಣಸಿನಕಾಯಿಯನ್ನು ಹಾಕಿ ಬೇಯಿಸಿ. ಕೊನೆಯಲ್ಲಿ ಕಾಳುಮೆಣಸಿನಪುಡಿ ಹಾಕಿ ಚೆನ್ನಾಗಿ ಕಲಸಿಕೊಂಡರೆ ಪೆಪ್ಪರ್ ಚಿಕನ್ ರೆಡಿ.