Home ಜಿಲ್ಲೆ ಮಂಗಳೂರು ಪೆಟ್ರೋಲ್ ಹಾಕಿ ಹಣ ಕೊಡದೆ ಕಾರು ಚಾಲಕ ಪರಾರಿ

ಪೆಟ್ರೋಲ್ ಹಾಕಿ ಹಣ ಕೊಡದೆ ಕಾರು ಚಾಲಕ ಪರಾರಿ

ಸುಳ್ಯ:ಅರಂತೋಡು ನಯಾರ ಪೆಟ್ರೋಲ್ ಪಂಪ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿ ಹಣ ಕೊಡದೆ ಪರಾರಿಯಾದ ಘಟನೆ ನಡೆದಿದೆ.
ಕಾರು ಚಾಲಕ ಕಾರಿಗೆ ರೂ. ೨,೫೧೦ ಪೆಟ್ರೋಲ್ ಹಾಕಿ ಹಣ ಕೊಡದೇ ಪರಾರಿಯಾಗಿದ್ದು, ಸುಳ್ಯ ದಾಟಿ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು, ಆಟೋ ಚಾಲಕರು, ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಅಡ್ಡ ಗಟ್ಟಿದಾಗ ಕಾರನ್ನು ನಿಲ್ಲಿಸದೇ ಪುತ್ತೂರು ಕಡೆ ಪರಾರಿಯಾಗಿದೆ. ಕಾರಿನ ಪತ್ತೆಗಾಗಿ ಬಲೆ ಬೀಸಲಾಗಿದೆ.