Home ಜಿಲ್ಲೆ ಮಂಗಳೂರು ಪೃ ಬಾಳನ್ನು ಬೆಳಗುವ ಬದುಕು ಮಾತ್ರ ಸಾರ್ಥಕ ಬದುಕು – ಶ್ರೀಮದಾನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಕಾಳಹಸ್ತೇಂದ್ರ...

ಪೃ ಬಾಳನ್ನು ಬೆಳಗುವ ಬದುಕು ಮಾತ್ರ ಸಾರ್ಥಕ ಬದುಕು – ಶ್ರೀಮದಾನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು

ತನ್ನ ಸ್ವಾರ್ಥವನ್ನು ಬದಿಗಿರಿಸಿ ಪರರ ಬಾಳನ್ನು ಬೆಳಗಿಸುವ ಧ್ಯೇಯದೊಂದಿಗೆ ಬದುಕಿದ ಮಹನೀಯರನ್ನು ಸಮಾಜ ಎಂದೂ ಮರೆಯುವುದಿಲ್ಲ ಎನ್ನುವುದಕ್ಕೆ ಬಿ. ಹರಿಶ್ಚಂದ್ರ ಆಚಾರ್ಯರ ಬದುಕೇ ಸಾಕ್ಷಿ, ಅಂತಹ ಆದರ್ಶವನ್ನೇ ಮೈಗೂಡಿಸಿಕೊಂಡಿರುವ ಮುಂಬೈಯ ಸ್ವರ್ಣೋದ್ಯಮಿ ಶ್ರೀಧರ ವಿ. ಆಚಾರ್ಯ ಅವರಿಗೆ ಬಿಮ ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿಯನ್ನು ನೀಡಿರುವುದು ಅತ್ಯಂತ ಯುಕ್ತವಾದದ್ದು ಎಂದು ಶ್ರೀಮಜ್ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಬಿ. ಹರಿಶ್ಚಂದ್ರಾಚಾರ್ಯರ ೧೧೩ನೇ ಜನ್ಮದಿನೋತ್ಸವ ಸಮಾರಂಭದ ದಿವ್ಯ ಉಪಸ್ಥಿತಿಯನ್ನು ವಹಿಸಿ ಆಶೀರ್ವಚನ ನೀಡುತ್ತಿದ್ದರು. ಮಂಗಳೂರಿನ ಶ್ರೀ ಬಿ. ಹರಿಶ್ಚಂದ್ರ ಆಚಾರ್ಯ ಮೆಮೋರಿಯಲ್ ಟ್ರಸ್ಡ್ ಮಙ: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರಗಿದ ಬಿ. ಹರಿಶ್ಚಂಳದ್ರ ಆಚಾರ್ಯರ ೧೧೩ ಜನ್ಮ ದಿನೋತ್ಣ ಸಮಾರಂಭದಲ್ಲಿಆಶೀರ್ವಚನ ನೀಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್. ಕೆ. ಎಫ್. ಎಫ್. ಎಲಿಕ್ಸರ್ ಇಂಡಿಯಾ ಪ್ರೈ. ಲಿಮಿಟೆಡ್ ನ ಅಧ್ಯಕ್ಷರಾದ ಡಾ. ಜಿ. ರಾಮಕೃಷ್ಣ ಆಚಾರ್ ಪ್ರಗತಿಯ ಹೆಸರಿನಲ್ಲಿ ನಾವಿಂದು ಪ್ರಕೃತಿಗೆ ವಿರುದ್ಧವಾದ ಹಾದಿಯಲ್ಲಿ ಸಾಗುತ್ತಿದ್ದೇವೆ. ಇದರಿಂದ ಎಚ್ಚೆತ್ತುಕೊಂಡು ಪ್ರಕೃತಿಯೊಂದಿಗಿನ ಸಹಬಾಳ್ವೆಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು. ೨೦೨೬ ನೇ ಸಾಲಿನ ಬಿ. ಹರಿಶ್ಚಂದ್ರ ಆಚಾರ್ಯ ಸ್ಮಾರಕ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಧರ ವಿ. ಆಚಾರ್ಯರು ಬಿ.ಹರಿಶ್ಚಂದ್ರ ಆಚಾರ್ಯರಂತಹ ಪ್ರಾತಃ ಸ್ಮರಣೀಯರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ತನ್ನ ಭಾಗ್ಯ ಎಂದರು. ಟ್ರಸ್ಟಿನ ಅಧ್ಯಕ್ಷರಾದ ಎಸ್. ವಿ. ಆಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಿ. ಹರಿಶ್ಚಂದ್ರ ಆಚಾರ್ಯರ ಸಂಸ್ಮರಣಾ ಭಾಷಣ ಮಾಡಿದ ಕರ್ನಾಟಕ ಸರ್ಕಾರದ ನಿವೃತ್ತ ಕಂದಾಯ ಕಾರ್ಯದರ್ಶಿಗಳಾದ ಕೆ. ಎಸ್. ಪ್ರಭಾಕರ್ ಅವರು ಯಾವುದೇ ಸೌಲಭ್ಯಗಳಿಲ್ಲದಿದ್ದ ಅಂದಿನ ಸಂದರ್ಭದಲ್ಲಿ, ಅತ್ಯಂತ ದೀನ ಸ್ಥಿತಿಯಲ್ಲಿದ್ದ ವಿಶ್ವಕರ್ಮ ಸಮಾಜವನ್ನು ಸುಧಾರಿಸಲು ಬಿ. ಹರಿಶ್ಚಂದ್ರ ಆಚಾರ್ಯರು ಪಟ್ಟ ಪರಿಶ್ರಮ ನಮ್ಮ ಎಣಿಕೆಗೆ ಲಭಿಸಲಾರದು. ಸಮಾಜದ ಬಗ್ಗೆ ಅವರು ಕಂಡ ಕನಸನ್ನು ನನಸಾಗಿಸುವುದೇ ನಮ್ಮ ಧ್ಯೇಯವಾಗಬೇಕು ಎಂದರು. ಈ ಸಂದರ್ಭದಲ್ಲಿ ಸಮಾಜಕ್ಕೆಬಶ್ರೇಷ್ಠ ಸೇವೆ ಸಲ್ಲಿಸಿದ ಹಿರಿಯರಾದ ಬಿ. ಎ. ಆಚಾರ್ಯ ಮಣಿಪಾಲ ಹಾಗೂ ಮ. ಯೋಗೀಶ ಆಚಾರ್ಯರಿಗೆ ಗೌರವಾಭಿವಂದನೆ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಂಬೈ ಕರ್ನಾಟಕ ಅಸೋಸಿಯೇಷನ್ನಿನ ಅಧ್ಯಕ್ಷ ರವೀಶ್ ಗಣಪಯ್ಯ ಆಚಾರ್ಯ, ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಗೋಕುಲದಾಸ ನಾಯಕ್ ಶುಭ ಹಾರೈಸಿರು. ಶೈಕ್ಷಣಿಕವಾಗಿ ಹಾಗೂ ಕಲಾ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ) ಪ್ರತಿಭಾ ಪುರಸ್ಕಾರ ನೀಡಲಾಯಿತು. ಟ್ರಸ್ಟಿನ ಸದಸ್ಯೆ ಶ್ರೀಮತಿ ಲಲಿತಾ ಕೆ. ಆಚಾರ್ ಅವರ ’ ಸುಲಲಿತ ಕಾವ್ಯ ಗುಚ್ಛ’ ಎನ್ನುವ ಸಾಹಿತ್ಯ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಟ್ರಸ್ಟ್ ನಡೆಸುತ್ತಿರುವ ಉಚಿತ ವಿದ್ಯಾರ್ಥಿ ನಿಲಯವಾದ ’ ಆಶ್ರಯ ವಿದ್ಯಾರ್ಥಿಧಾಮ’ ದಶಮಾನೋತ್ಸವ ಸಂದರ್ಭದಲ್ಲಿ ಬೆಳ್ವಾಯಿ ಕುಟುಂಬಸ್ಥರು ನೀಡುತ್ತಿರುವ ರೂ. ಎರಡು ಲಕ್ಷ ಮೌಲ್ಯದ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಬಿ. ಸತೀಶ್ ರಾವ್ ಟ್ರಸ್ಟಿನ ಅಧ್ಯಕ್ಷರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ವಿಶ್ವಕರ್ಮ ಒಕ್ಕೂಟದ ಉಪಾಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ, ವಿಶ್ವಕರ್ಮ ಸಹಕಾರ ಬ್ತಾಂಕಿನಅಧ್ಯಕ್ಷ ಡಾ. ಎಸ್. ಆರ್. ಹರೀಶ್ ಆಚಾರ್ಯ, ಎಸ್. ಕೆ. ಜಿ. ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ. ಇದರ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ದುಬೈ ಶ್ರೀ ವಿಶ್ವಕರ್ಮ ಸೇವಾಸಮಿತಿಯ ಸ್ಥಾಪಕಾಧ್ಯಕ್ಷ ಶಾಂತಾರಾಮ ಆಚಾರ್ಯ ಕಿನ್ನಿಗೋಳಿ, ಹಳೆವಿದ್ಯಾರ್ಥಿ ಪ್ರತಿನಿಧಿ ಶಮಂತ್ ಆಚಾರ್ಯ ಉಪಸ್ಥಿತರಿದ್ದರು. ಜಿ. ಟಿ. ಆಚಾರ್ಯ ಮುಂಬೈ ಅಭಿನಂದನಾ ಭಾಚಣಗೈದರು. ಟ್ರಸ್ಟಿನ ಕಾರ್ಯದರ್ಶಿ ಡಾ. ಎಸ್.ಬಪಿ. ಗುರುದಾಸ್ ಪ್ರಸ್ತಾವನಾ ನುಡಿಗಳೊಂದಿಗೆ ಸ್ವಾಗತಿಸಿದರು. ಟ್ರಸ್ಟಿನ ಉಪಾಧ್ಯಕ್ಷ ಪ್ರೊ. ಜಿ. ಯಶವಂತ ಆಚಾರ್ಯ, ಸಹಕೋಶಾಧಿಕಾರಿ ಯಜ್ಞೇಶ್ವರ ಕೃಷ್ಣಾಪುರ ಟ್ರಸ್ಟಿನ ಸದಸ್ಯರುಗಳಾದ ಕೋಟೆಕಾರ್ ಪ್ರಭಾಕರ ಆಚಾರ್ಯ, ಹರಿದಾಸ್ ಎಸ್. ಪಿ. ಆಚಾರ್ಯ, ರತ್ನಾವತಿ ಜೆ. ಬೈಕಾಡಿ ಅಭಿನಂದನಾ ಪತ್ರಗಳನ್ನು ವಾಚಿಸಿದರು. ದಾಮೋದರ ಶರ್ಮ ಬಾರ್ಕೂರು ಹಾಗೂ ಭರತ್ ರಾಜ್ ಬೈಕಾಡಿ ನಿರೂಪಿಸಿದರು. ಸುಂದರ ಆಚಾರ್ಯ ಬೆಳುವಾಯಿ ಧನ್ಯವಾದ ಸಮರ್ಪಿಸಿದರು. ವಿಶ್ವಕರ್ಮ ಕಲಾ ಪರಿಷತ್ ( ರಿ.) ಮಂಗಳೂರು ಹಾಗೂ ಆಶ್ರಯ ವಿದ್ಯಾರ್ಥಿಧಾಮದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಜರಗಿತು.