
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.09: ಸಮಾಜದಲ್ಲಿ ಮಹಿಳೆಯರಿಂದ ಪುರುಷರೂ ಸಹ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಅದಕ್ಕಾಗಿ
ರಾಷ್ಟ್ರೀಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ರಚನೆ ಮಾಡಿದೆಂದು ಸಮಿತಿಯ ಅಧ್ಯಕ್ಷೆ ರಜಿನಿ ರಾಜ್ ಹೇಳಿದರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ, ಮಹಿಳಾ ಆಯೋಗ ಸೇರಿದಂತೆ ಅನೇಕ ಹೋರಾಟದ ಸಂಘ ಸಂಸ್ಥೆಗಳಿವೆ. ಕಾನೂನುಗಳೂ ಇವೆ. ಆದರೆ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡು ಮಹಿಳೆಯರು ಪುರುಷರ ಮೇಲೆ ದೌರ್ಜನ್ಯ ನಡೆದರೆ, ಪುರುಷರಿಗೆ ರಕ್ಷಣೆ ಇಲ್ಲದಾಗಿದೆ. ಅದಕ್ಕಾಗಿ ದೌರ್ಜನ್ಯಕ್ಕೆ ಒಳಗಾದ ಪುರುಷರೊಂದಿಗೆ ಸಮಾಲೋಚನೆ ಮಾಡಿ ಹೊಸ ಕಾನೂನು ಬಿರನ್ ಎಸ್ 318 ರ ಕಾನೂನು ಅಡಿ ಹೋರಾಟಕ್ಕೆ ಸಹಕಾರ ನೀಡಲಿದೆ.
ಈ ಸಮಿತಿಯ ಬಳ್ಳಾರಿ ಜಿಲ್ಲಾ ಅಧ್ಯಕ್ಷರನ್ನಾಗಿ ಬ್ಯಾಂಕಿನ ನಿವೃತ್ತ ಉದ್ಯೋಗಿ ರಾಮಕೃಷ್ಣ ಅವರನ್ನು ನೇಮಕ ಮಾಡಿದೆಂದು ತಿಳಿಸಿದರು.
ನಮ್ಮ ಸಮಿತಿಗೆ ಎರೆಡು ಸಾವಿರ ನೀಡಿ ಅಜೀವ ಸದಸ್ಯತ್ವ ಪಡೆಯಬಹುದು ಈ ರೀತಿ ಬಳ್ಳಾರಿ ಜಿಲ್ಲೆಯಲ್ಲಿ ಏಳು ಜನ ಸದಸ್ಯರಾಗಿದ್ದಾರೆ.
ಬಳ್ಳಾರಿ ನಗರದಲ್ಲಿ ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವ ಪ್ರಯತ್ನ ನಡೆದಿದೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಮಿತಿಯ ಖಜಾಂಚಿ ವೇದವಲ್ಲಿ, ಮ್ಯಾನೇಜಿಂಗ್ ಟ್ರಸ್ಟಿ ಶಕುಂತಲಾ, ರಾಮಕೃಷ್ಣ ಮುಂತಾದವರು ಇದ್ದರು.




























