Home ಜಿಲ್ಲೆ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಣೆ

ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬ ಆಚರಣೆ

ಸಂಜೆವಾಣಿ ವಾರ್ತೆ

ಕಂಪ್ಲಿ, ಮಾ.17:  ತಾಲೂಕಿನ ಎಮ್ಮಿಗನೂರು ಗ್ರಾಮದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ವೇಳೆ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಟಿ.ರಾಮು ಮಾತನಾಡಿ ಕೌಟುಂಬಿಕ ಸದಾಭಿರುಚಿಯ ಚಲನಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಜನರ ಮನ ಗೆದ್ದ ಅದ್ಭುತ ನಟ ಎಂದರು.

ನಂತರ ಗೌರವ  ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ನಟನೆಯ ಜೊತೆಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಅವರ ಜನ್ಮದಿನವನ್ನು ಇಡೀ ನಾಡಿನಾದ್ಯಂತ ಸ್ಪೂರ್ತಿ ದಿನವಾಗಿ ಆಚರಣೆ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಪದಾಧಿಕಾರಿಗಳಾದ ಎಚ್. ಮಲ್ಲೇಶ್,ಜಿ.ಬಸವರಾಜ, ಮಂಜಪ್ಪ ಹೂಗಾರ, ಧನಂಜಯ ರೆಡ್ಡಿ, ಶಿವನೇಗೌಡರ ರಾಮಪ್ಪ,ಮಲ್ಲಿಕಾರ್ಜುನ,ಬಡಿಗೇರ ವೀರೇಶ್, ಶಾಶ್ವತ ರೆಡ್ಡಿ, ಶ್ರೀನಿವಾಸ, ಮಾಬುಲಿ, ಚನ್ನಳ್ಳಿ ಮಹೇಶ, ಟೈಲರ್ ಹುಸೇನ್ ಸಾಬ್, ಹನುಮಂತಯ್ಯ, ಹೂಗಾರ್ ಲೋಕೇಶ್,ಭೀಷ್ಮ ಸೇರಿದಂತೆ ಇತರರು ಇದ್ದರು.