Home ಜಿಲ್ಲೆ ಮಂಗಳೂರು ಪುತ್ತೂರು ದೇವಳದಲ್ಲಿ ಶಿವಪಂಚಾಕ್ಷರಿ ಯಜ್ಞ

ಪುತ್ತೂರು ದೇವಳದಲ್ಲಿ ಶಿವಪಂಚಾಕ್ಷರಿ ಯಜ್ಞ

ಪುತ್ತೂರು: ಮಹಾಶಿವರಾತ್ರಿ ಪ್ರಯುಕ್ತ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷವಾಗಿ ನಡೆದ ಶಿವಪಂಚಾಕ್ಷರಿ ಯಜ್ಞ ಹಾಗೂ ಸಹಿತ ವಿವಿಧ ಪೂರ್ವಶಿಷ್ಟ ಸಂಪ್ರದಾಯದ ಕಾರ್ಯಕ್ರಮಗಳು ನಡೆದವು.
ಶಿವ ಪಂಚಾಕ್ಷರಿ ಯಜ್ಞವು ಇದೇ ಮೊದಲ ಬಾರಿ ಪುತ್ತೂರು ದೇಗುಲದಲ್ಲಿ ಆಯೋಜಿಸಲಾಯಿತು. ಪ್ರತೀ ವರ್ಷ ಪುತ್ತೂರು ದೇವಳದಲ್ಲಿ ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಬಾರಿ ಶಿವ ಪಂಚಾಕ್ಷರಿ ಯಜ್ಞ ಆಯೋಜನೆಗೊಂಡಿತು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರ ಸಾರಥ್ಯದಲ್ಲಿ ೧೦ ವೈದಿಕರು ಬೆಳಗ್ಗೆ ೯.೩೦ಕ್ಕೆ ಯಜ್ಞ ಆರಂಭಿಸಿದರು. ೧೦ ಸಾವಿರ ಆಹುತಿಗಳನ್ನು ನೀಡಿದ ಅನಂತರ ಮಧ್ಯಾಹ್ನ ಪೂರ್ಣಾಹುತಿ ನಡೆದು ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಶಿವರಾತ್ರಿಯ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಭಕ್ತ ಸಾಗರ ದೇವಾಲಯದಲ್ಲಿ ಕಂಡುಬಂತು. ವಿಶೇಷವಾಗಿ ಬಿಲ್ವಾರ್ಚನೆ ಸೇವೆ, ಶಿವ ಪಂಚಾಕ್ಷರಿ ಯಜ್ಞ ಸೇವೆ ಮಾಡಿಸುವುದರೊಂದಿಗೆ ಉಪವಾಸ, ವೃತಾಚರಣೆಗಳನ್ನು ಭಕ್ತರು ಕೈಗೊಂಡರು..
ಬೆಳಗ್ಗಿನಿಂದಲೇ ಭಜನೋತ್ಸವ ನಡೆಯಿತು. ರಾತ್ರಿ ಶ್ರೀದೇವರ ಮಹಾಪೂಜೆಯ ಬಳಿಕ ಉತ್ಸವ ಬಲಿ, ಕಟ್ಟೆ ಪೂಜೆ, ಚಂದ್ರಮಂಡಲ ರಥೋತ್ಸವ, ಕೆರೆಯಲ್ಲಿ ಆಯನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನ ಸಮಿತಿ ಸದಸ್ಯರು, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಹಾಗೂ ಭಕ್ತಾಧಿಗಳು ಪಾಲ್ಗೊಂಡರು.