
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.25: ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿ ಹಬ್ಬ (ಘಟಿಕೋತ್ಸವ)ದಲ್ಲಿ ಪ್ರಸ್ತುತ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸಿಎನ್ಆರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಲಿ ತಾಲೂಕು ಎಮ್ಮಿಗನೂರು ಗ್ರಾಮದ ವಿರುಪಾಕ್ಷ.ಕೆ ಇವರು ಆಹಾರ, ಹಸಿವು ಮತ್ತು ಬಡತನದ ಸಾಮಾಜಿಕ ಆಯಾಮಗಳು (ಬಳ್ಳಾರಿ ಜಿಲ್ಲೆಯನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿಯನ್ನು ಸ್ವೀಕರಿಸಿದರು ಈ ಹಿನ್ನೆಲೆಯಲ್ಲಿ ಗ್ರಾಮದ ಶಿಕ್ಷಣ ಪ್ರೇಮಿಗಳ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು . ಈ ವೇಳೆ ಶಿಕ್ಷಣ ಪ್ರೇಮಿ ಗಾದಿಲಿಂಗಪ್ಪ ಮಾತನಾಡಿ ಶೋಷಿತ ಸಮುದಾಯದ ಯುವಕರು ಸಾಮಾಜಿಕ ಮುಖ್ಯ ವಾಹಿನಿಗೆ ಬರಬೇಕಾದರೆ ಶಿಕ್ಷಣ ಪ್ರಬಲ ಅಸ್ತ್ರ, ಯಶಸ್ಸು ಭಗವಂತನ ಕೊಡುಗೆಯಲ್ಲ, ಅದು ಪರಿಶ್ರಮ ಮತ್ತು ಶ್ರದ್ಧೆಯ ಫಲ. ಯುವಕರು ಡಿಜಿಟಲ್ ವ್ಯಸನದಿಂದ ಹೊರಬಂದು ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರೆ ಯಶಸ್ಸು ದೊರೆಯುತ್ತದೆ ಎಂದರು. ಈ ಸಂದರ್ಭದಲ್ಲಿ ಪಕ್ಕೀರಪ್ಪ,ರಾಮಪ್ಪ, ನಿಂಗಪ್ಪ,ಶಾಂತಕುಮಾರ, ಬಸವರಾಜ, ಗಂಗಪ್ಪ, ಹನುಮಂತ, ಮಹೇಶ,ಮಲ್ಲಿಕಾ, ಮಹೇಶ, ಮಲ್ಲೇಶ ಹಾಗೂ ಕುಟುಂಬದವರು ಹಾಜರಿದ್ದರು.






















