ಪಿಡಬ್ಲುಡಿ ನೌಕರ ಸೋಮಣ್ಣ ನಿವೃತ್ತಿ: ಬಿಳ್ಕೊಡುಗೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಡಿ,03-
ನಗರದ ಪಿಬ್ಲ್ಯುಡಿ ಇಲಾಖೆಯಲ್ಲಿ 32 ವರ್ಷಗಳ ದೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದೆ ನೌಕರರ ಸೋಮಣ್ಣ ಅವರನ್ನು ಅತ್ಮೀಯವಾಗಿ ಬೀಳ್ಕೋಡುಗೆ ನೀಡಲಾಯಿತು.
ನಗರದ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೋಮಣ್ಣ ಅವರನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ರೇಣುಕಾದೇವಿ, ಇಲಾಖೆಯ ಸಹಾಯಕ ನಿರ್ದೇಶಕಿ ಶಾಂತಮ್ಮ ಅವರು ಸೋಮಣ್ಣ ಅವರಿಗೆ ಶಾಲು ಹೊದಿಸಿ, ಫಲಾತುಂಬೂಲ ನೀಡಿ ಅಭಿನಂದಿಸಿ, ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಕೋರಿದರು.


ಬಳಿಕ ಮಾತನಾಡಿದ ಅವರು, ಸೋಮಣ್ಣ ಅವರು ಕಳೆದ 32 ವರ್ಷಗಳು ಸುಧೀರ್ಘ ಸೇವೆಯಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೇ ಉತ್ತಮ ಸೇವೆ ಸಲ್ಲಿಸಿ, ಎಲ್ಲಾ ವರ್ಗದ ನೌಕರರು ಹಾಗೂ ಅಧಿಕಾರಿಗಳಿಗೆ ಪ್ರೀತಿ ಪಾತ್ರರಾಗಿದ್ದರು. ಅವರ ಒಳ್ಳೆತನ ಒಂದೇ ಕಡೆ ಕರ್ತವ್ಯ ನಿರ್ವಹಿಸುವಂತೆ ಮಾಡಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.


ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಮಹದೇವಸ್ವಾಮಿ, ಖಜಾಂಚಿ ಶಿವಕುಮಾರಯ್ಯ, ರಾಜ್ಯ ಪರಿಷತ್ ಸದಸ್ಯ ನಟರಾಜು, ಮಹದೇವಸ್ವಾಮಿ, ಮಹದೇವಯ್ಯ, ಮಹೇಂದ್ರ, ವಾಸು, ಪಿಬ್ಲ್ಯುಡಿ ಇಲಾಖೆಯ ನಂಜುಂಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಕೆ. ರಾಮಸ್ವಾಮಿ ಮೊದಲಾದವರು ಇದ್ದರು.