Home ಜಿಲ್ಲೆ ಪಾಲಿಕೆ ನೌಕರರ ಹೋರಟಕ್ಕೆ ಸಾಥ್ ನೀಡಿದ ಸೋಮಶೇಖರರೆಡ್ಡಿ

ಪಾಲಿಕೆ ನೌಕರರ ಹೋರಟಕ್ಕೆ ಸಾಥ್ ನೀಡಿದ ಸೋಮಶೇಖರರೆಡ್ಡಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.05: ಪಾಲಿಕೆ ಎಇಇ ವೀರೇಶ್ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ವಿ. ಕುಬೇರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಕುಬೇರ ಬಂಧನಕ್ಕೆ ಆಗ್ರಹಿಸಿ. ಪಾಲಿಕೆ ಮುಂದೆ ಪಾಲಿಕೆ ನೌಕರರ ಪ್ರತಿಭಟನೆ ಮೂರನೇ ದಿನವೂ ಮುಂದುವರೆದಿದೆ.

ನೌಕರರ ಪ್ರತಿಭಟನೆಗೆ ನಿನ್ನೆ ಸಂಜೆ ನಗರದ ಮಾಜಿ ಶಾಸಕ ಜಿ. ಸೋಮಶೇಖರ್ ರೆಡ್ಡಿ ಸಾಥ್ ನೀಡಿದರು.ಈ ವೇಳೆ ಮಾತನಾಡಿದ ಅವರು. ನೌಕರರ ಮೇಲೆ ಹಲ್ಲೆ ಮಾಡುವ ಹಕ್ಕು ಇವರಿಗೆ ಯಾರು ಕೊಟ್ರು ಎಂದು ಪ್ರಶ್ನೆ ಮಾಡಿದರು

ದುಂಡಾ ವರ್ತನೆ ತೋರಿದ ಕಾರ್ಪೋರೇಟರ್ ಬಂಧನವಾಗಬೇಕು. ಬಂಧನವಾಗೋವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಕಾಂಗ್ರೆಸ್ ಸಂಸ್ಕೃತಿಯೇ ಇಂತಹದ್ದು ಹೊಡೆಯೋದು ಬಡಿಯೋ ಕೆಲಸ. ಪ್ರಮಾಣಿಕವಾಗಿ ಕೆಲಸ ಮಾಡೋರ ಮೇಲೆ ಹೀಗೆ ಹಲ್ಲೆ ಮಾಡಿದ್ರೇ ಬಳ್ಳಾರಿಗೆ ಕೆಲಸ ಮಾಡಲು ಯಾರು ಬರುತ್ತಾರೆಂದರು ಜೊತೆಗೆ ಸ್ಥಳೀಯ ನಗರ ಶಾಸಕ ನಾರಾ ಭರತ್ ರೆಡ್ಡಿ ವಿರುದ್ಧ ಗುಡುಗಿದರು.

ನಂತರ ಹಲ್ಲೆಗೊಳಗಾದ ವೀರೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ ಸೋಮಶೇಖರ ರೆಡ್ಡಿ ಮತ್ತು ಬಿಜಿಪಿ ನಿಯೋಗ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ಆತಂಕಕ್ಕೆ ಒಳಗಾಗಬಾರದೆಂದು ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಈ ರೀತಿಯ ದಾಳಿಗಳು ನಡೆಯಬಾರದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ತಾವು ಒತ್ತಾಯಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ವೆಂಕಟರಮಣ, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕಾರ್, ಮಾಜಿ ಮಹಾಪೌರ ಇಬ್ರಾಹಿಂ ಬಾಬು, ವಾರ್ಡ್ ಸದಸ್ಯರಾದ ಗೋವಿಂದರಾಜುಲು, ಅಶೋಕ್ ಹಾಗೂ ಮಾಜಿ ಸದಸ್ಯ. ಎಸ್. ಮಲ್ಲನಗೌಡ ಮೊದಲಾದವರು ಇದ್ದರು