Home ಜಿಲ್ಲೆ ಪಾಲಿಕೆಯಲ್ಲಿ ಅಕ್ರಮ ಬಿ ಖಾತೆ ಲೋಕಾಯುಕ್ತರ ಪರಿಶೀಲನೆ

ಪಾಲಿಕೆಯಲ್ಲಿ ಅಕ್ರಮ ಬಿ ಖಾತೆ ಲೋಕಾಯುಕ್ತರ ಪರಿಶೀಲನೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ:ಮೇ,30- ಇಲ್ಲಿನ ಮಹಾನಗರಪಾಲಿಕೆ ವ್ಯಾಪ್ತಿಯ ವಲಯ ಕಛೇರಿಗಳಲ್ಲಿ ಮತ್ತು ಕೇಂದ್ರ ಕಛೇರಿಯಲ್ಲಿ ಅಕ್ರಮವಾಗಿ ನಡೆದಿರುವ ಬಿ-ಖಾತೆ ಮತ್ತು ಫಾರಂ-2 ವಿತರಣೆಯಲ್ಲಿ ಹಾಗೂ ಇನ್ನಿತರ ಸರ್ಕಾರಿ ಸೇವೆಯನ್ನು ನೀಡಲು ವಿಳಂಬ ಮಾಡುತ್ತಾ ಅಕ್ರಮ ಎಸಗುತ್ತಿದ್ದಾರೆಂಬ ದೂರುಗಳ ಹಿನ್ನಲೆಯಲ್ಲಿ ನಿನ್ನೆ ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಎಸ್ಪಿ ವಾಸುದೇವರಾಮ ಅರವರ ನೇತೃತ್ವದಲ್ಲಿ 4 ತಂಡಗಳು ಏಕಕಾಲಕ್ಕೆ ದಾಳಿ ಮಾಡಿ, ಶೋಧನೆಯನ್ನು ಮಾಡಿದ್ದು, ಈ ವೇಳೆ ಹಲವು ಅಕ್ರಮಗಳು ಕಂಡುಬಂದಿದ್ದು, ಈ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆಂದು. ಲೋಕಾಯುಕ್ತ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.