ಪಾದಯಾತ್ರೆಗಿಲ್ಲ ಅವಕಾಶನಾಡಿದ್ದು ನಗರದ ಎಪಿಎಂಸಿಯಲ್ಲಿ ಬಿಜೆಪಿ ಸಮಾವೇಶ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.15
:  ನಗರದಲ್ಲಿ ಜ.1 ರಂದು ನಡೆದ ಬ್ಯಾನರ್ ಗಲಾಟೆ, ಪೈರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಹಾಗು ಕಲ್ಯಾಣ ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಕುಸಿದಿರುವುದರ ವಿರುದ್ದ ನಾಡಿದ್ದು ಜ .17 ರಂದು ಬೆಳಿಗ್ಗೆ 11 ಕ್ಕೆ  ನಗರದ ಎಪಿಎಂಸಿ ಮೈದಾನದಲ್ಲಿ  ಬಿಜೆಪಿ ಮತ್ತು ಜೆಡಿಎಸ್ ಸೇರಿ  ಹೋರಾಟದ ಸಮಾವೇಶ ನಡೆಸುವುದು ನಿರ್ಧರವಾಗಿದೆ.
ಈ ಮೊದಲು ನಗರದ ಮೋತಿ ಸರ್ಕಲ್, ಗಡಗಿ ಚೆನ್ನಪ್ಪ ಸರ್ಕಲ್ ಇಲ್ಲ ಮುನಿಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆಸಲು ಬಿಜೆಪಿ ಜಿಲ್ಲಾಡಳಿತಕ್ಕೆ ಅನುಮತಿ ಕೋರಿತ್ತು.
ಆದರೆ ಪೊಲೀಸ್ ಇಲಾಖೆಯ ಸಲಹೆಯಂತೆ ನಗರದ ಎಪಿಎಂಸಿ ಯಾರ್ಡ್ ನಲ್ಲಿ ನಡೆಸಲು ಅನುಮತಿ ನೀಡಿದೆ. ಅಲ್ಲಿ ಸಮಾವೇಶ ನಡೆಸಬೇಕು. ಆದರೆ ಅಲ್ಲಿಂದ ನಗರದಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿಲ್ಲ ಎಂದು ಎಸ್ಪಿ ಡಾ.ಸುಮನ್ ಡಿ. ಪನ್ನೇಕರ್ ಸಂಜೆವಾಣಿಗೆ ಹೇಳಿದ್ದಾರೆ.
ಈಗಾಗಲೇ ಎಪಿಎಂಸಿ ಪ್ರದೇಶವನ್ನು ಪರೀಶಿಲನೆ ನಡೆಸಿದ್ದು ಅಂದು ವ್ಯಾಪಾರ ವಹಿವಾಟು ಒಂದಿಷ್ಟು ನಿಯಂತ್ರಣ ಮಾಡಿಕೊಳ್ಳಲು ಮಾರುಕಟ್ಟೆ ಸಮಿತಿಯವರು ಸಮ್ಮತಿಸಿದ್ದಾರೆ. ನಗರದ ಮಧ್ಯಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಬರದಿರಲು ಈ ನಿರ್ಧಾರ ಸೂಚೊಸಿದೆಂದು ತಿಳಿಸಿದರು.