ನವದೆಹಲಿ, ಸೆ. ೪: ಪಾಕಿಸ್ತಾನ ಕ್ರಿಕೆಟಿಗ ಹೈದರ್ ಅಲಿ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳಿಲ್ಲ ಎಂದು ಯುನೈಟೆಡ್ ಕಿಂಗ್ ಡಮ್ ದೃಢಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ.
ಕ್ರೌನ್ ಪ್ರಾಸಿಕ್ಯೂಷನ್ ಸರ್ವಿಸ್ (ಸಿಪಿಎಸ್) ಕೂಡ ಈ ವಿಷಯವನ್ನು ಮುಂದುವರಿಸದಿರಲು ನಿರ್ಧರಿ, ತನಿಖೆಯನ್ನು ಅಧಿಕೃತವಾಗಿ ಕೈಬಿಟ್ಟಿದೆ. ಬ್ರಿಟಿಷ್-ಪಾಕಿಸ್ತಾನಿ ಮಹಿಳೆಯ ಆರೋಪದ ನಂತರ ೨೪ ವರ್ಷದ ಬ್ಯಾಟರ್ ಹೈದರ್ ಅವರನ್ವು ಆಗಸ್ಟ್ ೪ರಂದು ಇಂಗ್ಲೆಂಡ್ ನ ಕೆಂಟ್ ನ ಸ್ಪಿಟ್ ಫೈರ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಬಂಧಿಸಲಾಗಿತ್ತು.
ತನಿಖೆಯ ವೇಳೆ ಅಲಿ, ತಾವು ನಿರಾಪರಾಧಿಯಾಗಿದ್ದು, ಈ ಆರೋಪ “ಆಘಾತಕಾರಿ” ಮತ್ತು “ಸುಳ್ಳು’ ಎಂದಿದ್ದರು. ವಿಚಾರಣೆಗೆ ಸಹಕರಿಸಿದ ಕಾರಣ ಅಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.


























