ಪಲ್ಲೇದ ಜಗದೀಶ ನಿಧನ

(ಸಂಜೆವಾಣಿ ವಾರ್ತೆ)

ಬಳ್ಳಾರಿ, ಡಿ.03: ತಾಲೂಕಿನ ಕುಡುತಿನಿ ಪಟ್ಟಣದ ವೀರಶೈವ ಮುಖಂಡರಾದ ಪಲ್ಲೇದ ಪಂಪಾಪತಿ, ಪಲ್ಲೇದ ದೊಡ್ಡಪ್ಪ ಅವರ ಸಹೋದರ ಪಲ್ಲೇದ ಜಗದೀಶ (72) ಅವರು ನಿನ್ನೆ ಅಪರಾಹ್ನ 3.30 ಕ್ಕೆ ದೈವಾಧೀನರಾಗಿದ್ದಾರೆ. ಇಂದು ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಪತ್ನಿ, ಪುತ್ರ, ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಗದೀಶ ಅವರು ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ, ಕುಡುತಿನಿಯ ಹರಗಿನದೋಣಿ ಸಣ್ಣ ಬಸನಗೌಡ ಹೈಸ್ಕೂಲ್ ನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.

ಜಗದೀಶ್ ಅವರ ನಿಧನಕ್ಕೆ ವೀ.ವಿ.ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಸಹ ಕಾರ್ಯದರ್ಶಿ ಯಾಳ್ಪಿ ಪಂಪನಗೌಡ, ಅಜೀವ ಸದಸ್ಯ ಎನ್.ವೀರಭದ್ರಗೌಡ ಮೊದಲಾದವರು ಶೋಕ ವ್ಯಕ್ತಪಡಿಸಿ ಜಗದೀಶ್ ಅವರ ಸೇವೆಯನ್ನು ಸ್ಮರಿಸಿದ್ದಾರೆ.