ಪರಿಸರ, ಸಾಮಾಜಿಕ ಕಾಳಜಿಗೆ ತಿಮ್ಮಕ್ಕ ಪ್ರೇರಣೆ

ಸಂಜೆವಾಣಿ ನ್ಯೂಸ್
ಮೈಸೂರು.ನ.17:-
ಪರಿಸರ ಉಳಿಸುವ ಅಥವಾ ಸಮಾಜಕ್ಕೆ ಪೂರಕವಾಗುವ ಯಾವುದೇ ಕೆಲಸದಲ್ಲಿ ತೊಡಗಿಸಿಕೊಳ್ಳಲು ಆಸಕ್ತಿಯೇ ಇಲ್ಲದಷ್ಟು ಮನುಷ್ಯ ಸ್ವಾರ್ಥಿ ಆಗಿದ್ದಾನೆ. ಎಂದು ಎಚ್.ವಿ.ರಾಜೀವ್ ಸ್ನೇಹ ಬಳಗದ ಅಧ್ಯಕ್ಷರೂ ಆದ ಕೆಪಿಸಿಸಿ ಸದಸ್ಯ ಎಚ್.ವಿ.ರಾಜೀವ್ ಕಳವಳ ವ್ಯಕ್ತಪಡಿಸಿದರು.


ಪರಿಸರ ಬಳಗದ ವತಿಯಿಂದ ಬಂಡೀಪಾಳ್ಯ ಸಮೀಪದ ಹಸಿರು ಮೈಸೂರು ನರ್ಸರಿ ಫಾರಂನಲ್ಲಿ ಭಾನುವಾರ ಆಯೋಜಿಸಿದ್ದ ವೃಕ್ಷ ಮಾತೆ, ಪರಿಸರ ರಾಯಭಾರಿ ಮತ್ತು ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.


ಮನುಷ್ಯನ ಸ್ವಾರ್ಥ, ದುರಾಸೆ, ಕೊಂಕುತನಗಳಿಗೆ ಪರಿಹಾರವೇ ಇಲ್ಲವಾಗಿದೆ. ತಾನು ಚನ್ನಾಗಿ ಇರಬೇಕು ಎಂಬುದನ್ನು ಬಿಟ್ಟು ಮನುಷ್ಯನಿಗೆ ಬೇರಾವುದೂ ಮುಖ್ಯ ಆಗುತ್ತಿಲ್ಲ. ಆದ್ದರಿಂದಲೇ ನಿವೃತ್ತಿ ನಂತರವೂ ಸಾಕಷ್ಟು ಜನರು ವಾಕಿಂಗ್‍ನಂತಹ ಚಟುವಟಿಕೆಗಳ ಆಚೆಗೆ ಯಾವುದರಲ್ಲೂ ತೊಡಗಿಸಿಕೊಳ್ಳುತ್ತಿಲ್ಲ. ಕನಿಷ್ಠ ನಾಲ್ಕೈದು ಗಿಡ ನೆಟ್ಟು ಪೆÇೀಷಣೆ ಮಾಡುವ ನಿಟ್ಟಿನಲ್ಲಿ ಸಾಲುಮರದ ತಿಮ್ಮಕ್ಕ ನಮಗೆಲ್ಲ ಸ್ಪೂರ್ತಿ ಆಗಬೇಕು ಎಂದು ಸಲಹೆ ನೀಡಿದರು.


ಅಭಿವೃದ್ಧಿ ಜತೆಗೆ ಪರಿಸರ ಉಳಿಸುವ ಸಮತೋಲನದ ಮಾರ್ಗದಲ್ಲಿ ನಡೆಯಬೇಕಿದೆ. ಹೀಗಾಗಿ ಎಚ್.ವಿ.ರಾಜೀವ್ ಸ್ನೇಹ ಬಳಗದಿಂದ ನಮ್ಮ ಬಡಾವಣೆಯಲ್ಲಿ 25 ಸಾವಿರ ಮರಗಳನ್ನು ಬಲ್ಲಹಳ್ಳಿಯ ಬಡಾವಣೆಯಲ್ಲಿ ಬೆಳೆಸಿದ್ದೇವೆ ಎಂದು ತಿಳಿಸಿದರು.
ಪರಿಸರ ಬಳಗದ ಪುಟ್ಟಸ್ವಾಮಿಗೌಡ ಮಾತನಾಡಿ, ಗಿಡ ನೆಟ್ಟು ಪೆÇೀಷಣೆ ಮಾಡುವುದು ಮಾತ್ರ ನಿಜಾರ್ಥದಲ್ಲಿ ಸಾಲುಮರದ ತಿಮ್ಮಕ್ಕನಿಗೆ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗುತ್ತದೆ. ನಮ್ಮವರ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಕೇಕ್ ಕತ್ತರಿಸುವ ಬದಲು ಗಿಡ ನೆಡುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಪರಿಸರ ಪ್ರೇಮಿ ವೆಂಕಟೇಶ್ ಮಾತನಾಡಿ, ನಾನು ಸಾಲುಮರದ ತಿಮ್ಮಕ್ಕನಿಂದ ಪ್ರೇರಣೆಗೊಂಡು ಚಾಮರಾಜನಗರ ಜಿಲ್ಲೆಯಲ್ಲಿ 10 ವರ್ಷದಿಂದ ಗಿಡ ನೆಟ್ಟು ಬೆಳೆಸುತ್ತಿದ್ದೇನೆ. ಇದುವರೆಗೆ 15 ಸಾವಿರ ಗಿಡಗಳನ್ನು ಮಲೆಮಹದೇಶ್ವರ ಬೆಟ್ಟದ ರಸ್ತೆ, ಕೊಳ್ಳೇಗಾಲ ಭಾಗದಲ್ಲಿ ನೆಟ್ಟು ಪೆÇೀಷಿಸುತ್ತಿದ್ದೇನೆ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪೆÇ್ರ.ಕಾಳಚನ್ನೇಗೌಡ ಮಾತನಾಡಿ, ಸಾಲುಮರದ ತಿಮ್ಮಕ್ಕ ದಲಿತ ಕುಟುಂಬದಲ್ಲಿ ಹುಟ್ಟಿದವರು. ಹಣ, ಶಿಕ್ಷಣ ಇಲ್ಲದಿದ್ದರೂ ಮಕ್ಕಳಿಲ್ಲದ ಕೊರಗು ನೀಗಿಸಿಕೊಳ್ಳಲು ಮರ ನೆಡುವ ದಾರಿ ಆಯ್ಕೆ ಮಾಡಿಕೊಂಡರು. ಪರಿಸರ ಕಾಳಜಿ ಮೂಲಕ ಈಗ ಸಾವಿರಾರು ಜನರಿಗೆ ಪ್ರೇರಣಾಶಕ್ತಿಯಾಗಿದ್ದಾರೆ ಎಂದು ಸ್ಮರಿಸಿದರು.


ಮಾಜಿಮೇಯರ್ ಬಿ.ಎಲ್.ಭೈರಪ್ಪ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಪರಿಸರ ಬಳಗದ ಪರಶುರಾಮೇಗೌಡ, ಲೀಲಾ ವೆಂಕಟೇಶ್, ಲೀಲಾ ಶಿವಕುಮಾರ್, ಹಾಸ್ಯ ಕಲಾವಿದ ಜಗ್ಗ(ಜೆಕೆ), ಸುಬ್ರಹ್ಮಣ್ಯ ಮುಂತಾದವರು ಮಾತನಾಡಿದರು. ಸಲ್ಮಾ ಅವರು ಸಾಲುಮರದ ತಿಮ್ಮಕ್ಕನ ಕುರಿತ ಗೀತೆ ಹಾಡಿದರು. ಅಂಜನಾ ಕವನ ವಾಚಿಸಿದರು. ಸಾಲುಮರದ ತಿಮ್ಮಕ್ಕನ ಸಾಧನೆಗಳನ್ನು ವರ್ಷಿಣಿ ಪರಿಚಯಿಸಿದರು. ಶ್ವೇತಾ ನಿರೂಪಿಸಿದರು.