ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕ ನಿರಾಕರಣೆ: ಸರ್ಕಾರದ ತಾರತಮ್ಯಕ್ಕೆ ತಾಯೂರು ಪ್ರಕಾಶ್ ವಿರೋಧ

ಸಂಜೆವಾಣಿ ವಾರ್ತೆ
ತಿ.ನರಸೀಪುರ:-
ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕ ನೀಡುತ್ತಿರುವ ರಾಜ್ಯ ಸರ್ಕಾರ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳನ್ನು ಅದೇ ಸೌಲಭ್ಯದಿಂದ ವಂಚಿಸಿರುವುದು ಸ್ಪಷ್ಟ ತಾರತಮ್ಯವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ವಾಲ್ಮೀಕಿ?ನಾಯಕ ಸಂಘಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಅವರು ಲೋಕೋಪ ಯೋಗಿ ಸಚಿವ ಸತೀಶ ಜಾರಕಿಹೋಳಿ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.


ಬೆಳಗಾವಿಗೆ ತೆರಳಿ ಸಚಿವ ಜಾರಕಿಹೋಳಿ ರವರನ್ನು ಬೇಟಿ ಮಾಡಿ ಮನವಿ ಸಲ್ಲಿಸಿರುವ ತಾಯೂರು ಪ್ರಕಾಶ್“ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುವಂತೆ ಮಾಡುವ ನೀತಿ ಅಕ್ಷಮ್ಯವಾಗಿದೆ. ಸಮಾಜ ಕಲ್ಯಾಣ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ನಾಯಕ/ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳಿಗೆ ಭೋದನಾ ಶುಲ್ಕ ಸೌಲಭ್ಯ ಜಾರಿಗೆ ತರಬೇಕು” ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ
ಇನ್ನೂ, 2008ರಿಂದ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸ್ವಂತ ಕಟ್ಟಡವೇ ಇಲ್ಲದೆ ಪ್ರತಿ ತಿಂಗಳು ?22 ಲಕ್ಷ ಬಾಡಿಗೆ ನೀಡಲಾಗುತ್ತಿದ್ದು, ಪರಿಶಿಷ್ಟ ವರ್ಗಗಳ ನಿರ್ದೇಶಕರ ಕಚೇರಿಗೂ ತಿಂಗಳಿಗೆ ?19 ಲಕ್ಷ ಬಾಡಿಗೆ ವೆಚ್ಚವಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಬಾಡಿಗೆ ಕಚೇರಿಗಳಿಂದ ಇದುವರೆಗೂ ಕನಿಷ್ಠ ?219 ಕೋಟಿ ಹಣ ಸಮಾಜದ ಅಭಿವೃದ್ಧಿಗೆ ಬಳಕೆಯಾಗದೆ ಬಾಡಿಗೆ ರೂಪದಲ್ಲಿ ವ್ಯರ್ಥವಾಗಿದೆ ಈ ಬಗ್ಗೆ ತಾವು ಕ್ರಮವಹಿಸುವಂತ್ತೆ ತಾಯೂರು ಪ್ರಕಾಶ್ ಸಚಿವರನ್ನು ಕೋರಿದ್ದಾರೆ


ಬೆಂಗಳೂರು ಎಂ.ಎಸ್. ಬಿಲ್ಲಡಿಂಗೆ ಎರಡೂ ಕಚೇರಿಗಳನ್ನು ತಕ್ಷಣ ವರ್ಗಾಯಿಸಿದರೆ ಸಾರ್ವಜನಿಕ ಹಣ ಉಳಿಯಲಿದ್ದು. ಆ ಹಣವನ್ನು ಪರಿಶಿಷ್ಟ ಪಂಗಡಗಳ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕೆಂದು ಸಚಿವರಲ್ಲಿ ಒತ್ತಾಯಿಸಿದ್ದಾರೆ
ಸಚಿವರು ಮನವಿಯನ್ನು ಆಲಿಸಿ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.