Home ಜಿಲ್ಲೆ ಮಂಗಳೂರು ಪರಾರಿಯಾಗಿದ್ದ ಆರೋಪಿ ದಸ್ತಗಿರಿ

ಪರಾರಿಯಾಗಿದ್ದ ಆರೋಪಿ ದಸ್ತಗಿರಿ

ಉಡುಪಿ | ವಿಶೇಷ ಕಾರ್ಯಾಂಗ ದಂಡಾಧಿಕಾರಿಯವರು ಮತ್ತು ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಇವರ ಆದೇಶದಂತೆ ಮಹಮ್ಮದ್ ಫೈಜಲ್ ಎಂಬುವವರಿಗೆ ಹೊರ ಜಿಲ್ಲೆಗೆ ಗಡಿ ಪಾರು ಆದೇಶ ಆಗಿದ್ದು, ಆರೋಪಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಬಗ್ಗೆ ಪಡೆದ ಮಾಹಿತಿಯಂತೆ ಆದೇಶದ ಪ್ರತಿಯನ್ನು ಜಾರಿ ಮಾಡಲು ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಹತ್ತಿರ ಇರುವಿಕೆಯನ್ನು ಖಚಿತಪಡಿಸಿಕೊಂಡು, ಆದೇಶದ ಪ್ರತಿಯನ್ನು ಜಾರಿ ಮಾಡಲು ಹೋದಾಗ ಮಹಮ್ಮದ್ ಫೈಜಲ್‌ನು ತಾನು ಕುಳಿತುಕೊಂಡಿದ್ದ ಏಂ೨೦ಒಃ೭೬೬೬ ನಂಬರ ಬಿಳಿ ಬಣ್ಣದ ಕಾರನ್ನು ಒಮ್ಮಲೇ ಹಿಮ್ಮುಖವಾಗಿ ಚಲಿಸಿದಾಗ ರಸ್ತೆಯ ಪಕ್ಕದಲ್ಲಿ ಇದ್ದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು, ಓಡಿ ಹೋಗಿರುತ್ತಾನೆ, ಸದರಿ ಸಮಯ ಆತನ ಕಾರು ಜಖಂಗೊಡಿರುತ್ತದೆ. ಈ ಅಪಘಾತಕ್ಕೆ ಏಂ೨೦ಒಃ೭೬೬೬ನೇ ಕಾರಿನ ಚಾಲಕ ಮಹಮ್ಮದ್ ಫೈಜಲ್ ಇವರ ಅಜಾರತೂಕತೆ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಆತನ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ೩೭/೨೦೨೬ ಕಲಂ: ೨೮೧ ಃಓS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ನಂತರದಲ್ಲಿ ದಿನಾಂಕ ೨೮/೦೩/೨೦೨೬ರಂದು ಈ ಮೇಲಿನ ಪ್ರಕರಣದಲ್ಲಿ ಸ್ಥಳ ಮಹಜರಿನ ಪ್ರಕ್ರಿಯೆ ನಡೆಸುವಾಗ ಅಪಘಾತದಲ್ಲಿ ಒಳಗೊಂಡ ಏಂ೨೦ಒಃ೭೬೬೬ನೇ ಹುಂಡೈ ಕ್ರೆಟ್ಟಾ ಕಾರಿನ ಒಳಗೆ ಮಾದಕ ವಸ್ತು ಗಾಂಜಾ ಇರುವುದು ಕಂಡು ಇರುವುದು ಕಂಡುಬಂದಿರುತ್ತದೆ. ಸದ್ರಿ ಕಾರಿನಲ್ಲಿ ಒಟ್ಟು ಗಾಂಜಾ ೧೭೩.೪೨ ಗ್ರಾಮ್ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂಪಾಯಿ ೮೦೦೦/- ಆಗಬಹುದು ಹಾಗೂ ಕಾರಿನಲ್ಲಿ ದೊರೆತ ಸ್ಯಾಮ್‌ಸಂಗ್ ಕಂಪೆನಿಯ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ ೬,೦೦೦/- ಮತ್ತು ನೀಲಿ ಬಣ್ಣದ ಹೋನರ್ ಮೊಬೈಲ್ ಅಂದಾಜು ಮೌಲ್ಯ ರೂಪಾಯಿ ೫,೦೦೦/- ರೂ ಆಗಬಹುದು. ಸದ್ರಿ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಸ್ಥಳದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು. ಆರೋಪಿ ಮೊಹಮ್ಮದ್ ಫೈಜಲ್ ಮತ್ತು ಇನ್ನೊರ್ವ ಆರೋಪಿಯು ಅಕ್ರಮವಾಗಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಕಾಯುತ್ತಿರುವುದಾಗಿರುವುದು ತಿಳಿದುಬಂದಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: ೩೮/೨೦೨೬ u/s ೮(ಚಿ)(ಛಿ), ೨೦(b)(ii)ಚಿ&b ಓಆPS ಂಛಿಣರಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಮೇಲಿನ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮಹಮ್ಮದ್ ಫೈಜಲ್ ತಂದೆ: ಸುಲೇಮಾನ್ ವಾಸ: ಬಂಗ್ಲಗುಡ್ಡೆ ಕಸಬ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇತನನ್ನು ಪೊಲೀಸ್ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಸ್ತಗಿರಿ ಮಾಡಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.