ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ, ಸುರಕ್ಷತಾ ಕಾರ್ಯಕ್ಕೆ ಜಿಲ್ಲಾಡಳಿತ ಅಸ್ತು

ಕಾರ್ಕಳ- ಬೈಲೂರು ಗ್ರಾಮದ ಯರ್ಲಪಾಡಿಯ ಪರಶುರಾಮ ಥೀಮ್ ಪಾರ್ಕ್ ಸ್ವಚ್ಛತೆ ಹಾಗೂ ಸುರಕ್ಷತಾ ಕಾರ್ಯವನ್ನು ನಿರ್ವಹಿಸಲು ಉಡುಪಿ ಜಿಲ್ಲಾಧಿಕಾರಿಯರು ನಿರ್ಮಿತಿ ಕೇಂದ್ರಕ್ಕೆ ಅದೇಶಿಸಿದ್ದಾರೆ.
ಬೈಲೂರು ಯರ್ಲಪಾಡಿಯ ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಪೊದೆ ಗಿಡಗಂಟಿಗಳು ಬೆಳೆದು ಸಂಪೂರ್ಣ ಪಾಳು ಬಿದ್ದ ಸ್ಥಿತಿಯಲ್ಲಿರುತ್ತದೆ. ಥೀಂ ಪಾರ್ಕ್‌ನ್ನು ಸ್ವಚ್ಛಗೊಳಿಸಲು ಹಾಗೂ ಜನವರಿ ೧೪ ರಿಂದ ಸದ್ರಿ ಥೀಮ್ ಪಾರ್ಕ್ ನಲ್ಲಿ ನಿರಂತರ ಒಂದು ತಿಂಗಳ ಕಾಲ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಶಾಸಕರು,ಕಾರ್ಕಳ ವಿಧಾನಸಭಾ ಕ್ಷೇತ್ರ ಮಾಜಿ ಸಚಿವರು ಕರ್ನಾಟಕ ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ.
ಥೀಂ ಪಾರ್ಕ್ ಕುರಿತು ತನಿಖೆಯು ಸಿಐಡಿ ಸಂಸ್ಥೆಯಿಂದ ನಡೆಯುತ್ತಿದೆ ಹಾಗೂ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಹಾಗೂ ಥೀಂ ಪಾರ್ಕ್ ನಲ್ಲಿ ತುಂಬಾ ಗಿಡ, ಗಂಟೆ,ಪೊದೆಗಳು ಬೆಳೆದಿರುವುದರಿಂದ ಸಾರ್ವಜನಕರು ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಸೂಕ್ತವಲ್ಲವಾದ್ದರಿಂದ ಇಲಾಖಾವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲು ತೀರ್ಮಾನಿಸಿದೆ.
ಈ ಹಿನ್ನಲೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ನ ಕಾಮಗಾರಿ ಮುಕ್ತಾಯವಾಗುವರೆಗೆ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆಯ ಜವಾಬ್ದಾರಿಯಾಗಿದ್ದು ಕಾಮಗಾರಿಯು ಸಂಪೂರ್ಣ ಹಸ್ತಾಂತರವಾಗುವರೆಗೆ ಥೀಂ ಪಾರ್ಕ್ ನ ಸ್ವಚ್ಛತೆ ಹಾಗೂ ಅಲ್ಲಿರುವ ಬೆಲೆಬಾಳುವ ಇಟeಛಿಣಡಿoಟಿiಛಿ ಉಪಕರಣಗಳು, ಸಾಮಾಗ್ರಿಗಳು (ಇquiಠಿmeಟಿಣs), ಇತ್ಯಾದಿಗಳ ಸುರಕ್ಷತೆ ಸಹ ನಿರ್ಮಿತಿ ಕೇಂದ್ರದಾಗಿರುತ್ತದೆ.
ಪಾರ್ಕ್ ನಿರ್ವಹಣೆಯನ್ನು ಸರಿಯಾಗಿವಹಿಸಿ ಯಾವುದೇ ಸಮಸ್ಯೆಗಳಿಗೆ ಅಸ್ಪದ ನೀಡದೆ ನಿರ್ವಹಣೆ ಮಾಡಲು ನಿರ್ದೇಶಿಸಿದೆ. ಕೆಲವು ಅಂಶಗಳನ್ನು ಪಾಲಿಸಲು ಸೂಚಿಸಿದೆ. ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಸ್ವಚ್ಛತಾ ಕಾರ್ಯ, ಗಿಡಗಂಟೆ ತೆರವು ಹಾಗೂ ಕಸ ವಿಲೇವಾರಿ ಕಾರ್ಯಗಳನ್ನು ಕೂಡಲೇ ಕೈಗೊಳ್ಳುವುದು. ಸಿ.ಸಿ ಕ್ಯಾಮೆರಾ ಅಳವಡಿಸುವುದು ಹಾಗೂ ಸದ್ರಿ ಸ್ಥಳಕ್ಕೆ ಭದ್ರತಾ ದೃಷ್ಟಿಯಿಂದ ೨೪೭ ಕಾವಲುಗಾರರನ್ನು ನಿಯೋಜಿಸುವ ಬಗ್ಗೆ ಕ್ರಮವಹಿಸುವುದು. ಅಧಿಕೃತ ವ್ಯಕ್ತಿಗಳನ್ನು ಹೊರತುಪಡಿಸಿ, ಥೀಂ ಪಾರ್ಕ್‌ಗೆ ಸಾರ್ವಜನಿಕರು, ಯಾರೂ ಪ್ರವೇಶಿಸದಂತೆ ಕ್ರಮವಹಿಸುವುದು.
ಥೀಂಪಾರ್ಕ್ ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದು. ಥೀಂ ಪಾರ್ಕ್ ಪ್ರದೇಶಕ್ಕೆ ಯಾರಾದರೂ ಅತಿಕ್ರಮಣ ಪ್ರವೇಶ ಮಾಡಿದರೆ ಅವರ ವಿರುದ್ಧ ಥೀಂ ಪಾರ್ಕ್ ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮವಹಿಸುವುದು. ಥೀಂ ಪಾರ್ಕ್ ಸ್ಥಳದಲ್ಲಿರುವ ಅಮೂಲ್ಯ ವಸ್ತುಗಳು, ನಿರ್ಮಾಣ ಸಾಮಾಗ್ರಿಗಳನ್ನು ಸುಸ್ಥಿತಿಯಲ್ಲಿಡುವಂತೆ ನೋಡಿಕೊಳ್ಳುವುದು. ಥೀಂ ಪಾರ್ಕ್ ಕಾಮಗಾರಿ ಮುಕ್ತಾಯಗೊಳ್ಳುವರೆಗೂ ಥೀಂ ಪಾರ್ಕ್ ನ ಸಂಪೂರ್ಣ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದು.
ಈ ಮೇಲ್ಕಂಡ ವಿಷಯಗಳ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ, ಅನುಪಾಲನ ವರದಿಯನ್ನು ಜ,೧೦ ರೊಳಗೆ ಈ ಕಚೇರಿಗೆ ವರದಿ ಸಲ್ಲಿಸುವಂತೆ ಹಾಗೂ ಪ್ರತಿ ವಾರ ತಾವು ಖುದ್ದಾಗಿ ಭೇಟಿ ನೀಡಿ ಸ್ವಚ್ಛತೆಯ ಮೇಲುಸ್ತುವಾರಿ ವಹಿಸಿ ಸಹಿತ ಫೋಟೋದೊಂದಿಗೆ ವರದಿ ನೀಡಲು ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ.