
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಅ.01 ಕರ್ನಾಟಕ ರಾಜ್ಯ ಪದವೀಧರ (6-8) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 2026 – 31ರ ಅವಧಿಗೆ ಅಧ್ಯಕ್ಷರಾಗಿ ಮುರುಘರಾಜ ಸೊನ್ನದ್, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗದಗಿನ ಗಂಗಮ್ಮನವರ, ಖಜಾಂಚಿ ಕೆ.ರಾಮಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಅಜ್ಜಪ್ಪ ಎಲ್ ಜಿ, ರತ್ನವ್ವ ಪುರದ, ಉಪಾಧ್ಯಕ್ಷೆಯಾಗಿ ಸುನಿತಾ ಚವ್ಹಾಣ್, ಸಾಂಸ್ಕೃತಿಕ ಕಾರ್ಯದರ್ಶಿ ನಿರಂಜನ್ ಮೂರ್ತಿ ಕೆ, ಉಪಾಧ್ಯಕ್ಷರಾಗಿ ಚನ್ನ ದಾಸರ ಜಗದೀಶ್, ವಕ್ತಾರ ರಾಗಿ ಮಂಜುನಾಥ್ ಕೆ, ಕ್ರೀಡಾ ಕಾರ್ಯದರ್ಶಿ ಸಂತೋಷ್ ಜಿ, ಸಹ ಕಾರ್ಯದರ್ಶಿ ಮುಗಳಿ ಉಷಾ, ನಿರ್ದೇಶಕರಾಗಿ ನವೀನ ಎಂ, ಆಯ್ಕೆಯಾಗಿದ್ದಾರೆ.























