
ಪುತ್ತೂರು; ಪಡುಮಲೆಯ ಬದಿನಾರು ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಕುಂಟಾರು ಬ್ರಹ್ಮಶ್ರೀ ವೇದಮೂರ್ತಿ ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದೆ.
ಜ. ೧೪ ರಂದು ಮಕರ ಸಂಕ್ರಮಣದಂದು ರಾತ್ರಿ ದೈವಗಳ ಭಂಡಾರ ಇಳಿಸಿ, ಧ್ವಜಾರೋಹಣ, ಬೀರತಂಬಿಲ ನಡೆಯಿತು. ಜ. ೧೫ ರಂದು ಬೆಳಗ್ಗೆ ೪೮ ಕಾಯಿ ಗಣಪತಿ ಹೋಮ ನಡೆದು ಆನೆ ಚಪ್ಪರ ಏರಿಸಲಾಯಿತು. ಬಳಿಕ ಮಕರ ತೋರಣ ಏರಿಸಿ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ರಾತ್ರಿ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಿತು. ವಿಶ್ವೇಶ್ವರ ಭಟ್ ನೇತೃತ್ವದಲ್ಲಿ ಪೂಜಾ ವಿದಿವಿಧಾನಗಳು ನೆರವೇರಿತು.
ಜ.೧೬ ರಂದು ಶುಕ್ರವಾರ ಬೆಳಗ್ಗೆ ಕಿನ್ನಿಮಾಣಿ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪಾಲಕ್ಕಿ ಉತ್ಸವ, ಬೀರತಂಬಿಲ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅಣಿಲೆ, ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಶಶಿಧರ ರೈ ಕುತ್ಯಾಳ, ಗಣೇಶ್ ಭಟ್ ಈಶಮೂಲೆ, ಶ್ರೀಧರ ಎನ್. ನೇರ್ಲಂಪಾಡಿ, ಅನಿಲ್ ಕುಮಾರ್ ಕನ್ನಡ್ಕ, ರೋಹಿತ್ ಕುಮಾರ್ ಮುಡಿಪುನಡ್ಕ, ಯಮುನಾ ಪೈರುಪುಣಿ, ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಸದಸ್ಯರಾದ ಜನಾರ್ದನ ಪೂಜಾರಿ ಪದಡ್ಕ, ಶ್ರೀನಿವಾಸ ಗೌಡ ಕನ್ನಯ, ಉದಯ ರಾವ್ ಪಡುಮಲೆ, ಪುರಂದರ ರೈ ಕುದ್ಕಾಡಿ, ಗೋಪಾಲ ನಾಯ್ಕ ದೊಡ್ಡಡ್ಡ, ಶ್ರೀಮತಿ ಕನ್ನಡ್ಕ, ನಾರಾಯಣ ಗೌಡ ಉಳಯ, ಸೀತಾರಾಮ ಗೌಡ ಉಳಯ, ರತ್ನಾಕರ ಶೆಟ್ಟಿ ಕುದ್ಕಾಡಿ, ಸಂತೋಷ ಆಳ್ವ ಗಿರಿಮನೆ, ಗಂಗಾಧರ ರೈ ಮೇಗಿನಮನೆ, ಮಹಾಲಿಂಗ ಪಾಟಾಳಿ ಕುದ್ಕಾಡಿ, ಸತೀಶ್ ಗೌಡ ಉಳಿಗ ಹಾಗೂ ಊರಪರವೂರ ಭಕ್ತಾಧಿಗಳು ಭಾಗವಹಿಸಿದ್ದರು.
ಜ.೧೭ ರಂದು ಪೂಮಾಣಿ ದೈವದ ನೇಮ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.




























