ಪಡಿತರ ಅಕ್ಕಿ ಕಾಳಸಂತೆಯಲ್ಲಿ  ಮಾರಾಟ ತಡೆಯುವಲ್ಲಿ ವಿಫಲ

Oplus_0

 ಸಂಜೆವಾಣಿ ವಾರ್ತೆ

 ಹಗರಿಬೊಮ್ಮನಹಳ್ಳಿ. ಡಿ.12 ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ  ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ವಾಗುತ್ತಿದ್ದರೂ,  ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಗ್ಯಾರೆಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಹೆಚ್. ಜಂದಿಸಾಬ್ ಬೇಸರ ವ್ಯಕ್ತಪಡಿಸಿದರು.

 ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಪಡಿತರ ಅಕ್ಕಿಯನ್ನು ತಿಂಗಳ ಪೂರ್ತಿ ವಿತರಿಸಬೇಕು. ಭಾಗ್ಯಜ್ಯೋತಿ ಮನೆಗಳಿಗೆ  58 ಯೂನಿಟ್ ಮಾತ್ರ ವಿದ್ಯುತ್ ಒದಗಿಸುವುದು ಸೂಕ್ತವಲ್ಲ  ಎಂದರು.

 ಗ್ಯಾರಂಟಿ ಸಮಿತಿಯ ತಾಲೂಕ ಅಧ್ಯಕ್ಷ ಗುರುಬಸವರಾಜ್ ಸೊನ್ನದ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಕ್ತಿ ಯೋಜನೆಗೆ ಬಸವಗಳ ಕೊರತೆ ಇದೆ ಎಂದು ಆರೋಪಿಸುವ ಕೆಲವರಿಗೆ 2013 ರಿಂದ ಇದುವರೆಗೂ 57 ಹೊಸ ಬಸ್ಸುಗಳು ಕಲ್ಪಿಸಲಾಗಿದೆ. ಸಭೆಗೆ ಮಾಹಿತಿ ಇಲ್ಲದೆ ಮಾತನಾಡುತ್ತಿರುವುದು ತರವಲ್ಲ. ಐದು ಗ್ಯಾರಂಟಿ ಇಲಾಖೆಯವರು ತಮ್ಮ ಇಲಾಖೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರು  ಅದರ ಬಗ್ಗೆ ಗ್ಯಾರಂಟಿ ಸಮಿತಿಯ ಸದಸ್ಯರಿಗೆ ಮಾಹಿತಿ ಹಾಗೂ ಆಹ್ವಾನ ನೀಡಬೇಕು. ಗೃಹಲಕ್ಷ್ಮಿ ಯೋಜನೆಯಡಿ ತಾಲೂಕಿನಲ್ಲಿ ಆಗಸ್ಟ್ ವರಿಗೆ ಮಾಸಿಕ 7.5ಕೋಟಿ ರೂ.ಯಂತೆ ಒಟ್ಟು 168 ಕೋಟಿ ರೂ. ನೀಡಲಾಗಿದೆ ಎಂದರು.

 ಗ್ಯಾರೆಂಟಿ ಜಿಲ್ಲಾ ಸದಸ್ಯ ಪರಶುರಾಮ್ ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸಂಚಾರ ನಡೆಸಬೇಕು ಎಂದು ಸೂಚಿಸಿದರು.

 ಸಾರಿಗೆ ಘಟಕದಲ್ಲಿ 19 ಸಿಬ್ಬಂದಿಗಳು ಕೊರತೆಯಾಗಿದ್ದು. ಮಾರ್ಗ ನಿರ್ವಹಣೆಯಲ್ಲಿ ತೊಡಕಾಗಿದ್ದು. ಸಮರ್ಪಕ ಸೇವೆ  ಒದಗಿಸಲಾಗಿದೆ ಎಂದು ಘಟಕದ ಅಧಿಕಾರಿ ಸಂತೋಷ್ ನಾಯ್ಕ್ ತಿಳಿಸಿದರು.

  ಕಳೆದ ಸಭೆಯಲ್ಲಿ ಸಮಗ್ರ ಮಾಹಿತಿಯನ್ನು ತೆಗೆದುಕೊಂಡು ಬರಲು ಆಹಾರ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು ಆದರೆ ಅವರು ಗೈರು ಹಾಜರಿಯಾಗಿದ್ದಾರೆ ಅವರಿಗೆ ನೋಟಿಸ್ ನೀಡುವಂತೆ ತಾಲೂಕ್ ಸಮಿತಿಯ ಎಸ್ ಎ. ಸಂತೋಷ್,,ಜಿ ಗಿರೀಶ್  ಸೂಚಿಸಿದರು.

 ಯುವ ನಿಧಿ ಅಧಿಕಾರಿ ಹಟ್ಟೆಪ್ಪ ಮಾಹಿತಿಯ  ವರದಿ ಸಲ್ಲಿಸಿದರು.

ತಾ ಪಂ ಇ ಒ ಪಿ.ವಿಶ್ವನಾಥ್ ಮಾತನಾಡಿ ಸರ್ಕಾರದ ಐದು ಗ್ಯಾರಂಟಿಗಳು ಬಡ ಜನರಿಗೆ ಅನುಕೂಲವಾಗಿವೆ . ಐದು ಗ್ಯಾರಂಟಿಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಿರುವುದು ಸಂತೋಷ. ಆದರೆ ಕೆಲವೊಂದು ಬಾರಿ  ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಅವುಗಳ ನೂನ್ಯತೆಗಳನ್ನು ತಿದ್ದಿಕೊಂಡು ಹೋಗಬೇಕು  ಎಂದರು.

 ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಎ ಇ ಇ ನಾಗರಾಜ್ ಕುರೇಕುಪ್ಪ, ಸಿಡಿಪಿಓ ಬೋರೇಗೌಡ, ಸಮಿತಿಯ ಸದಸ್ಯರಾದ ಉಲವತ್ತಿ  ರಾಘವೇಂದ್ರ, ವೆಂಕಟೇಶ್ ನಾಯ್ಕ್, ಸರ್ದ ರಾಮಣ್ಣ ಸದ್ದಾಂ ಹುಸೇನ್, ಪ್ರಕಾಶ,ಉಪ್ಪರ್ ಕಾರ್ತಿಕ್ , ಸುಧಾ,ನಾಗಮ್ಮ ಇದ್ದರು.