ಪಟ್ಟಣ ಪಂ. ವಾರ್ಡ್‍ಗಳಿಗೆ ತೆರಳಿ ಸಮಸ್ಯೆ ಆಲಿಸಿದ ಶಾಸಕ ಮಂಜುನಾಥ್

ಸಂಜೆವಾಣಿ ವಾರ್ತೆ
ಹನೂರು ಜು 6 :-
ಪಟ್ಟಣದ ವಾರ್ಡ್ ಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪಟ್ಟಣ ನಿವಾಸಿಗಳ ಸಮಸ್ಯೆ ಆಲಿಸಿದರು. ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಆಗಬೇಕಿರುವ ಸಿಸಿರಸ್ತೆ ಚರಂಡಿ ಸೇತುವೆಗಳು ನಿರ್ಮಿಸುವ ಸಂಬಂಧ ಪಟ್ಟಣ ಪಂಚಾಯಿತಿ ಇಂಜಿನಿಯರುಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಪಟ್ಟಣದ ವಿವಿದ ಭಾಗಗಳಿಗೆ ನೀರು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂಬ ಆರೋಪ ಮಾಡಿದ ಹಿನ್ನೆಲೆ ಪಟ್ಟಣ ಪಂಚಾಯಿತಿ ವಾಟರ್ ಮೇನ್ ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು. ಇನ್ನು ಮುಂದೆ ಈ ರೀತಿಯ ನೀರಿನ ಸಮಸ್ಯೆ ಅದಲ್ಲಿ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಂದು ಎಚ್ಚರಿಕೆ ನೀಡಿದರು.


ಪಟ್ಟಣದ ವಿವಿಧ ವಾರ್ಡ್ ಗಳಲ್ಲಿ ಸಿ.ಸಿ ರಸ್ತೆ ಚರಂಡಿ ಸೇತುವೆಗಳು ನಿರ್ಮಿಸುವ ಸಂಬಂಧ ಪಟ್ಟಣ ಪಂಚಾಯಿತಿ ಇಂಜಿನಿಯರುಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಆದಷ್ಟು ಬೇಗ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.


ದೇವಾಂಗ ಪೇಟೆ ದೇವಾಲಯದ ಮುಂಭಾಗದ ಬೀದಿಯಿಂದ ಜೀವಿಗೌಡ ಕಾಲೇಜ್ ತನಕ ತಡೆಗೋಡೆ ನಿರ್ಮಾನಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಪಟ್ಟಣ ಜಿ.ವಿ ಗೌಡ ಕಾಲೇಜ್ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ಯುಜಿಡಿ ನಿರ್ಮಿಸುವ ಸಂಬಂಧ ತಾಲೂಕು ದಂಡಾಧಿಕಾರಿ ಹಾಗೂ ವಿ.ಎ ಶೇಷಣ್ಣ ರವರ ಜೊತೆ ಸ್ಥಳ ಪರಿಶೀಲನೆ ನಡೆಸಿ ಸ್ಥಳ ನಿಗದಿ ಪಡಿಸಲು ತಿಳಿಸಿದರು.


ಜಿಲ್ಲಾ ನಗರಾಭಿವೃದ್ಧಿ ಕೋಶ ಶಾಖೆ ಇ.ಇ ಅಲ್ತಾಫ್, ತಹಶೀಲ್ದಾರ್ ವೈ. ಕೆ. ಗುರುಪ್ರಸಾದ್, ವಿ.ಎ ಶೇಷಣ್ಣ, ಪಟ್ಟಣ ಪಂ. ಕಿರಿಯ ಅಭಿಯಂತರ ನಾಗರಾಜು, ಪ್ರಭಾರ ಆರೋಗ್ಯ ನಿರೀಕ್ಷಕ ಪ್ರಕಾಶ್, ಪ. ಪಂ. ಅಧ್ಯಕ್ಷೆ ಮಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಸದಸ್ಯರಾದ ಮಹೇಶ್, ಪವಿತ್ರ, ಸಂಪತ್ ಕುಮಾರ್, ಮುಖಂಡರಾದ ಮಂಜೇಶ್, ಗೋವಿಂದ, ಅಮೀನ್, ವೆಂಕಟೇಶ್ ಸೇರಿದಂತೆ ಇನ್ನಿತರರು ಇದ್ದರು.