Home ಜಿಲ್ಲೆ ಮಂಗಳೂರು ಪಂದಳ ರಾಜರಿಗೆ ಹನುಮಗಿರಿ ಆಹ್ವಾನ

ಪಂದಳ ರಾಜರಿಗೆ ಹನುಮಗಿರಿ ಆಹ್ವಾನ

ಪುತ್ತೂರು; ವಿಶ್ವದಲ್ಲಿಯೇ ಖ್ಯಾತಿ ಪಡೆದ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳನ್ನು ಹೊಂದಿರುವ ಪಂದಳ ಮನೆತನದ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರಿಗೆ ಹನುಮಗಿರಿ ಬ್ರಹ್ಮಕಲಶೋತ್ಸವದ ಆಹ್ವಾನಪತ್ರವನ್ನು ಕೇರಳದ ಪಂದಳ ಅರಮನೆಯಲ್ಲಿ ಫಲತಾಂಬೂಲ ಸಹಿತ ನೀಡಿ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್ ಸಿ ನಾರಾಯಣ ರೆಂಜ ಮತ್ತು ಸುಬ್ಬಪ್ಪ ಪಾಟಾಳಿ ಅವರು ಆಮಂತ್ರಿಸಿದರು.
ಮಕರವಿಳಕ್ಕು ಉತ್ಸವಕ್ಕೆ ೩ ದಿನಗಳ ಮುನ್ನ, ಅಯ್ಯಪ್ಪನ ಆಭರಣಗಳನ್ನು ಇಲ್ಲಿಂದ ಮೆರವಣಿಗೆಯಲ್ಲಿ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಅಂತಹ ಪವಿತ್ರ ಕ್ಷೇತ್ರದ ಮಹಾರಾಜರು ಮೊದಲ ಬಾರಿಗೆ ಹನುಮಗಿರಿಗೆ ಆಗಮಿಸಲಿದ್ದಾರೆ. ಎ. ೧೨ರ ಬ್ರಹ್ಮಕಲಶ ಸಂದರ್ಭ ಅವರು ಆಗಮಿಸಿ ಶ್ರೀಕ್ಷೇತ್ರದ ಕೋದಂಡರಾಮ ಹಾಗೂ ಪಂಚಮುಖಿ ಆಂಜನೇಯರ ದರುಶನ ಪಡೆದು ಹನುಮಗಿರಿಯ ಭಕ್ತರನ್ನು ಹರಸಲಿದ್ದಾರೆ ಎಂದು ಆರ್ ಸಿ ನಾರಾಯಣ ರೆಂಜ ಅವರು ತಿಳಿಸಿದ್ದಾರೆ.
ಪಂದಳ ಮಹಾರಾಜ ಪುಣರ್ತಂ ನಾರಾಯಣ ವರ್ಮ ಅವರು ಕೇರಳ ರಾಜ್ಯ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ರಾಜ್ಯಾಧ್ಯಕ್ಷರಾದ ಅವರು ಪಂದಳಂ ಅರಮನೆ ಆಡಳಿತ ಮಂಡಳಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶಬರಿಮಲೆ ದೇವಸ್ಥಾನದ ರಕ್ಷಣೆಗಾಗಿ ೨೦೧೮ ಅಕ್ಟೋಬರ್ ೨ ರಂದು ಪಂದಳಂನಲ್ಲಿ ನಡೆಸಿದ ನಾಮ ಜಪ ಯಾತ್ರೆಯ ಮುಖ್ಯ ಸಂಘಟಕರಲ್ಲಿ ಒಬ್ಬರಾಗಿದ್ದರು. ಸನಾತನ ಮೌಲ್ಯಗಳನ್ನು ಹಿಂದೂ ಸಮಾಜದಲ್ಲಿ ಪ್ರಚಾರ ಮಾಡಲು ಮತ್ತು ಸನಾತನ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ನೀಡಲು ಶ್ರಮಿಸುವ ಸಂಸ್ಥೆಗಳ ಕಾರ್ಯಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.