
ಸುಳ್ಯ:ಆರಾಧನಾ ಸಮಿತಿ ಪಂಜ, ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಂದ ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶನಿವಾರ ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.
ಸೆ. ೧೪ ರಿಂದ ಸೆ.೧೬ ತನಕ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಗಣೇಶೋತ್ಸವ ಜರುಗಲಿದೆ.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಗೌಡ ಜಳಕದ ಹೊಳೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದರು. ಗಣೇಶೋತ್ಸವ ಸಮಿತಿಯ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಅಧ್ಯಕ್ಷತೆ ವಹಿಸಿದ್ದರು. ಆರಾಧನಾ ಸಮಿತಿ ಗೌರವಾಧ್ಯಕ್ಷ ಮಾಧವ ಗೌಡ ಜಾಕೆ, ಅಧ್ಯಕ್ಷ ಸವಿತಾರ ಮುಡೂರು, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ಹೇಮಂತ್ ರೈ ಕೆ, ಉಪಾಧ್ಯಕ್ಷ ಯೋಗೀಶ್ ಚಿದ್ಗಲ್ಲು, ಆರಾಧನಾ ಸಮಿತಿ ಕಾರ್ಯದರ್ಶಿ ಜಯರಾಮ ಕಲ್ಲಾಜೆ ಉಪಸ್ಥಿತರಿದ್ದರು.
ಸೆ.೧೩ ಮತ್ತು ಸೆ. ೧೪ ರಂದು ವಿವಿಧ ಕ್ರೀಡಾ -ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳು. ಸೆ. ೧೫ ರಂದು ಎಸ್ ಡಿ ಎಂ ಕಲಾ ವೈಭವ, ಬೆಂಗಳೂರು ತಂಡದಿಂದ ನಾಟ್ಯ ವೈಭವ, ಕ್ರೀಡಾ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಲಿದೆ. ಸೆ.೧೬.ಶೋಭಾಯಾತ್ರೆ-ಜಲಸ್ತಂಭನ ದಂದು ಈ ವರ್ಷ ವಿಶೇಷವಾಗಿ ಪ್ರಪ್ರಥಮ ಬಾರಿಗೆ ಆಹ್ವಾನಿತ ತಂಡಗಳ ಪಿಲಿನಲಿಕೆ ಸ್ಪರ್ಧೆ ನಡೆಯಲಿದೆ. ತೀರ್ಥಾನಂದ ಕೊಡೆಂಕಿರಿ ಸ್ವಾಗತಿಸಿ, ಹೇಮಂತ್ ರೈ ಕೆ ವಂದಿಸಿದರು.

































