
ಉಡುಪಿ: ಅಸ್ಪೃಶ್ಯರಿಗೆ , ಬಡವರಿಗೆ , ಕೂಲಿ ಕಾರ್ಮಿಕರಿಗೆ ಮೊತ್ತ ಮೊದಲಿಗೆ ಆರೋಗ್ಯದ ಗ್ಯಾರಂಟಿ ಕೊಡಿ ಆಮೇಲೆ ಉಳಿದ ಗ್ಯಾರಂಟಿ. ಬಡವರು , ಅಸ್ಪೃಶ್ಯರು , ಕೂಲಿ ಕಾರ್ಮಿಕರು ಆರೋಗ್ಯದಿಂದ ಬಧುಕುಳಿದರೆ ಮಾತ್ರ ನಿಮ್ಮ ಪಂಚ ಗ್ಯಾರಂಟಿ ಉಪಯೋಗಕ್ಕೆ ಬರುವುದು. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಹೇಳಿದರು
ಅವರು ಇದೇ ಫೆಬ್ರವರಿ ೨ ರಿಂದ ೧೭ ರ ವರೆಗೆ ರಾಜ್ಯದ ವಿವಿಧ ಸಂಘಟನೆಗಳ ವತಿಯಿಂದ ನಡೆಯುವ ಆರೋಗ್ಯ ಹಕ್ಕಿನ ಜಾಥಾದ ಕುರಿತು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಎಲ್ಲಾ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಸಹಭಾಗಿತ್ವಕ್ಕೆ ವಹಿಸುತ್ತಿದ್ದಾರೆ. ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲೂ ಸರಿಯಾದ ಔಷಧಿಗಳಿಲ್ಲಾ , ವ?ಧ್ಯರು ಹೊರಗಡೆ ಮೆಡಿಕಲ್ ಗೆ ಚೀಟಿ ಬರೆದು ಕೊಡುತ್ತಿದ್ದಾರೆ. ಸರಕಾರಿ ಆಸ್ಪತ್ರೆಯನ್ನೇ ನಂಬಿಕೊಂಡಿರುವ ಅಸ್ಪೃಶ್ಯರು , ಬುಡಕಟ್ಟು ಸಮೂದಾಯದವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೆ ಚಿಕ್ಕಪ್ರಾಯದಲ್ಲೇ ಅಸುನೀಗುತ್ತಿದ್ದಾರೆ. ಬಡವರು ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಔಷಧಿ , ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ , ಖಾಸಗೀ ಸಹಭಾಗಿತ್ವದ ಸರಕಾರಿ ಆಸ್ಪತ್ರೆಗಳು ದುಭಾರಿ ಚಿಕಿತ್ಸಾ ವೆಚ್ಚ ಹಾಕುವುದರಿಂದ ಬಡವರು ಸಂವಿಧಾನ ದತ್ತ ಆರೋಗ್ಯ ಹಕ್ಕಿನಿಂದ ವಂಚಿತರಾಗಿದ್ದಾರೆ.
ಈ ಸರಕಾರಿ ಖಾಸಗೀ ಸಹಭಾಗಿತ್ವ ಕಾರ್ಯಕ್ರಮವನ್ನು ಕೂಡಲೇ ಕ?ಬಿಡಬೇಕು?.. ಈ PPP ವ್ಯವಸ್ಥೆಯನ್ನು ಈ ಕೂಡಲೇ ಕ?ಬಿಡದಿದ್ದರೆ ಬಡವರು , ಕೂಲಿ ಕಾರ್ಮಿಕರು , ಬುಡಕಟ್ಟು ಸಮೂದಾಯದವರು, ಅಸ್ಪೃಶ್ಯರು ಮುಂದಿನ ಬಾರಿ ಇದೇ ಸರಕಾರ ಮುಂದುವರಿಯುವ ಗ್ಯಾರಂಟಿಯನ್ನು ಸಹ ನಿಲ್ಲಿಸಬೇಕಾಗಬಹುದು ಎಂದು ಸುಂದರ ಮಾಸ್ತರ್ ಆಕ್ರೋಶ ಹೊರಹಾಕಿದರು.
ಈ ಸರಕಾರಿ ಆಸ್ಪತ್ರೆಗಳ ಅನಾನುಕೂಲಗಳನ್ನು ವಿರೋಧಿಸಿ ರಾಜ್ಯಾಧ್ಯಂತ ನಡೆಯುವ ಪ್ರತಿಭಟನಾ ಜಾಥಾದಂತೆ ಉಡುಪಿಯಲ್ಲೂ ಸಹ ಇದೇ ತಾರೀಖು ೧೦ ? ೦೨ ? ೨೦೨೬ ಮಂಗಳವಾರದಂದು ಕೊರಗ ಒಕ್ಕೂಟ ಮತ್ತು ಇತರ ಸಹಭಾಗೀ ಸಂಘಟನೆಯೊಂದಿಗೆ ” ಆರೋಗ್ಯ ಹಕ್ಕಿನ ಜಾಥಾ ” ಮಣಿಪಾಲ ಟೈಗರ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ನಡೆಯಲಿದೆ.
ಈ ಪ್ರತಿಭಟನಾ ಜಾಥಾದಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಡವರು , ಕೂಲಿ ಕಾರ್ಮಿಕರು , ಬುಡಕಟ್ಟು ಸಮೂದಾಯದವರು , ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾಗವಹಿಸಬೇಕೆಂದು ಸುಂದರ ಮಾಸ್ತರ್ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಇದರ ಮ?ಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿಯವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

























