
ಪುತ್ತೂರು: ಪುತ್ತೂರಿನ ನಗರದ ನೆಲಪಾಲ್ ವೀರಾಂಜನೇಯ ಕ್ಷೇತ್ರದಲ್ಲಿ ನ.೨೭ರಿಂದ ೩ ದಿನಗಳ ಕಾಲ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಲೋಗೋ ಮತ್ತು ಸ್ಟಿಕ್ಕರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಪುತ್ತೂರಿನ ಪ್ರತಿಷ್ಠಿತ ದ್ವಾರಕ ಸಂಸ್ಥೆಯ ಮಾಲಕ ಗೋಪಾಲಕೃಷ್ಣ ಅವರು ಲೋಗೊ ಮತ್ತು ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ರಾಜಿ ಬಲರಾಮ ಆಚಾರ್ಯ ಅವರು ಸ್ಟಿಕ್ಕರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಉಜ್ವಲ್ ಪ್ರಭು, ಜೀವಂಧರ್ ಜೈನ್, ವಿದ್ಯಾಧರ್ ಜೈನ್, ಬೂಡಿಯಾರ್ ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಡಾ. ಪ್ರಸನ್ನ, ಶ್ರೀಧರ್ ತೆಂಕಿಲ, ಸಂತೋಷ್ ಕುಮಾರ್ ರೈ, ದಾಮೋದರ ಪಾಟಾಳಿ, ಶಿವಕುಮಾರ್ ಪಿ. ಬಿ ಹಾಗೂ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
























