
ಸಂಜೆವಾಣಿ ವಾರ್ತೆ
ಬಳ್ಳಾರಿ. ನ. 16: ಇದೇ ತಿಂಗಳು 22 ಮತ್ತು 23 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಬಳ್ಳಾರಿ ಮತ್ತು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಆಫ್ ಕರ್ನಾಟಕ ಸಹಯೋಗದೊಂದಿಗೆ ವೆಟ್ರನ್ಸ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ವೆಟ್ರನ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷೆ ಶಾಂತಾಬಾಯಿ ಕಟ್ಟಿಮನಿ ತಿಳಿಸಿದರು.
ಅವರು ನಿನ್ನೆ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ, ಈ ಕ್ರೀಡಾಕೂಟದಲ್ಲಿ 30 ವರ್ಷದ ವಯಸ್ಸಿನಿಂದ ನೂರು ವರ್ಷ ವಯಸ್ಸಿನ ಕ್ರೀಡಾಪಟುಗಳು ಭಾಗವಹಿಸಬಹುದು. ಐದು ವಿಭಾಗಗಳಲ್ಲಿ ನಡೆಸಲಾಗುತ್ತಿದ್ದು 100 ಮೀಟರ್ ನಿಂದ 5000 ಮೀಟರ್ ಓಟದ ಸ್ಪರ್ಧೆಗಳು ಎಸೆತ ಹಾಗೂ ಜಿಗಿತದ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದೆ,
65 ವರ್ಷ ವಯಸ್ಸಿನ ಸ್ಪರ್ದಾಳುಗಳಿಗೆ ಕೆಲವೊಂದು ಆಟಗಳನ್ನು ನಿಷೇಧಿಸಲಾಗಿದೆ, ವಿಕಲಚೇತನರಿಗೆ ಸಹ ಈ ಕ್ರೀಡಾಕೂಟದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ
ಪ್ರತಿಸ್ಪರ್ಧೆಯಲ್ಲೂ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಿದೆ. ಮತ್ತು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಗೆದ್ದವರಿಗೆ ಡಿಸೆಂಬರ್ 13 ಮತ್ತು 14 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆಯುವ ದಕ್ಷಿಣ ಭಾರತದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಕ್ರೀಡಾಪಟುಗಳಿಗೆ ವಸತಿ ಮತ್ತು ಊಟ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು. ರಾಜ್ಯ ಅಧ್ಯಕ್ಷ ವೇಣುಗೋಪಾಲ್ ಖಜಾಂಚಿ ಡಿ ಎಸ್ ದೊಡ್ಡಯ್ಯ ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ವಿಜಯ್ ಅಬ್ದುಲ್ ಮುನಫ್ ಇದ್ದರು.
























