ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.12: ನ್ಯಾಯಮೂರ್ತಿ ನಾಗಮೋಹನ್‌ದಾಸ್ ಒಳ ಮೀಸಲಾತಿಯ ಏಕ ಸದಸ್ಯ ವಿಚಾರಣಾ ಆಯೋಗವು ವರದಿಯಲ್ಲಿ ಪರಿಶಿಷ್ಟ ಜಾತಿ ಬಲಗೈ ಸೇರಿದ ಪರೈಯ್ಯ ಪರವನ್ ಜಾತಿಯನ್ನು ಸೇರಿಸಲಾರದೆ ಬಲಗೈ ಸಂಬಂದಿಸಿದ ಜಾತಿಗಳನ್ನು ಸೇರಿಸದೇ ಇನ್ನೂ ಹಲವು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಬಲಗೈ ಛಲವಾದಿ ಸಮುದಾಯದ ಜನ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿರುವುದಲ್ಲದೇ, ಜಾತಿಯೇ ಅಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಇವುಗಳನ್ನು ಶೇಕಡ 1 ರಷ್ಟು ಮೀಸಲಾತಿ ಸೇರಿಸಿ ಕೊಂಡರಿಂದ ಕೂಡಲೇ ಅವುಗಳನ್ನು ರದ್ದು ಪಡಿಸಿ,ಸದರಿ ಬಲಗೈ ಜನಸಂಖ್ಯೆಗೆ ಅನುಗುಣವಾಗಿ ಸರಿಯಾಗಿ ಸಮೀಕ್ಷೆಯನ್ನು ಮಾಡಿಸಿ ಒಳ ಮೀಸಲಾತಿಯನ್ನು ಸಂಬಂಧಿಸಿದ ಜಾತಿಗಳಿಗೆ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಿಕ್ಕಾಗಿ ಛಲವಾದಿ ಮಹಾಸಭಾ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿದೆ. ಈ ಸಂದರ್ಭದಲ್ಲಿ
ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯ ಹಿರಿಯ ಮುಖಂಡ ಡಿ.ಸೂರಿ ಗೋವಿಂದ ನಾಗಲಕೇರ ಛಲವಾದಿ ಹಿರಿಯ ಮುಖಂಡರು ಸಿ ಆರ್ ಹನುಮಂತ ಕಂಪ್ಲಿ ಛಲವಾದಿ ಹಿರಿಯ ಮುಖಂಡರು ಸಿ ಶಿವಕುಮಾರ್ ಜಿಲ್ಲಾ ಅಧ್ಯಕ್ಷರು ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಾಧ್ಯಕ್ಷ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮಾನಯ್ಯ ಬಿ ಗೋನಾಳ್ ಜಿಲ್ಲಾ ಉಪಾಧ್ಯಕ್ಷ ಛಲವಾದಿ ಮಹಾಸಭಾ ಛಲವಾದಿ ಲೋಕೇಶ್ ಕಪಗಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಛಲವಾದಿ ಮಹಾಸಭಾ ನಾಗರಾಜ್ ತೋಲಮಾಮೀಡಿ ಛಲವಾದಿ ಯುವ ಮುಖಂಡರು ಮಲ್ಲಿಕಾರ್ಜುನ ಬಿ ಗೋನಾಳ ಛಲವಾದಿ ಯುವ ಮುಖಂಡರು ಜಯರಾಮ ಜಲವಾದಿ ಮುಖಂಡರು ಗಿರೀಶ್ ಕುಡುತಿನಿ ಛಲವಾದಿ ಮುಖಂಡರು ಭಾವೈಕ್ಯ ವೆಂಕಟೇಶ್ ಛಲವಾದಿ ಹಿರಿಯ ಮುಖಂಡರು ವಿರುಪಾಕ್ಷಿ ಛಲವಾದಿ ಮುಖಂಡರು ದೇವೇಂದ್ರ ಕಂಪನಿ ಯುವ ಮುಖಂಡರು ಡಿ ವಿಠಲ್ ಛಲವಾದಿ ಮುಖಂಡರು ಶೇಷಪ್ಪ ಛಲವಾದಿ ಯುವ ಮುಖಂಡರು ಕೊಳಗಲ್ಲು ಮುಕ್ಕಣ್ಣ ಛಲವಾದಿ ಮುಖಂಡರು ಲಕ್ಷ್ಮಿಕಾಂತ್ ಸುಗ್ಗೆನಹಳ್ಳಿ ಛಲವಾದಿ ಮುಖಂಡರು ಯುವ ಮುಖಂಡರು ಮಧುರಾಜ್ ಬಿ ಗೋನಾಳ ಯುವ ಮುಖಂಡರು ರಮೇಶ ಮಾವಿನಹಳಿ ಯುವ ಮುಖಂಡರು ಡಿ ರಾಮಕೃಷ್ಣ ಛಲವಾದಿ ಕೇರಿ ಕೇಶವ ಕೇಶಪ್ಪ ಶೇಷಪ್ಪ ಛಲವಾದಿ ಕೇರಿ ಯುವ ಮುಖಂಡರು ಕಗ್ಗಲ್ ಈರಣ್ಣ ಛಲವಾದಿ ಯುವ ಮುಖಂಡರು ಉಪಸ್ಥಿತರಿದ್ದರು.

























