
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಮೇ.25 ತಾಲ್ಲೂಕಿನ ನಂದಿಪುರ ಪುಣ್ಯಕ್ಷೇತ್ರದ ಬಸ್ ನಿಲ್ದಾಣದಲ್ಲಿ ಮಳೆನೀರು ನಿಂತಿದ್ದು, ರೋಗರುಜಿನಗಳ ತಾಣವಾಗಬಾರದೆಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಎಂ .ಬಸವನಗೌಡ ಸ್ವಚ್ಛತೆಗೆ ಮುಂದಾದರು.
ರಾತ್ರಿ ಸುರಿದ ಮಳೆಯಿಂದ ಚರಂಡಿಯಲ್ಲಿ ಕಸ ಕಡ್ಡಿ, ನೀರಿನ ಬಾಟಲಿಗಳಿಂದ ನಿಂತಿದ್ದ ನೀರನ್ನು ತೆರವುಗೊಳಿಸಿ, ಸಂಚಾರಕ್ಕೆ ಹಾಗೂ ಆರೋಗ್ಯಕ್ಕೆ ದಾರಿಯಾಯಿತು.
ಮುಂದಿನ ದಿನಗಳಲ್ಲಿ ಚರಂಡಿಯ ನೀರು ನಿಲ್ಲದಂತೆ ಅಲ್ಲಲ್ಲಿ ಜಾಲರಿ ನಿರ್ಮಿಸಲಾಗುವುದು. ಗ್ರಾಮದವರ ಸಹಕಾರದಿಂದ ಸ್ವಚ್ಚತೆಯ ಮಾದರಿ ಗ್ರಾಮವಾಗಿಸಲು ಕಾರ್ಯೋನ್ಮುಖರಾಗಬೇಕಿದೆ ಎಂದರು.
ಈ ಸಮಯದಲ್ಲಿ ಭರಡ್ಡಿ ದೇವರೆಡ್ಡಿ, ಎಚ್.ಎಸ್.ದೊಡ್ಡಬಸವರೆಡ್ಡಿ, ಎಚ್.ಎಸ್.ಕೊಟ್ರಡ್ಡಿ, ಯು.ಹನುಮಂತಪ್ಪ ಹಾಗೂ ಗ್ರಾಮದ ಮುಖಂಡರು ಇದ್ದರು.
hbh01


























