Home ಜಿಲ್ಲೆ ಬೆಂಗಳೂರು ನೈಜಲ್ ಫರ್ನಾಂಡಿಸ್ ಪೆÇೀಪ್ ಗೌರವದ `ನೈಟ್’ ಪದವಿ

ನೈಜಲ್ ಫರ್ನಾಂಡಿಸ್ ಪೆÇೀಪ್ ಗೌರವದ `ನೈಟ್’ ಪದವಿ

ಬೆಂಗಳೂರು, ಫೆ.27:ಬೆಂಗಳೂರು ಮೂಲದ ಪ್ರಕಾಶಕ ಹಾಗೂ ಎಟಿಸಿ ಪಬ್ಲಿಷರ್ಸ್ ಮತ್ತು ಆರ್ಕ್‍ಲೈಟ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೈಜಲ್ ಫರ್ನಾಂಡಿಸ್ ಅವರಿಗೆ ಕ್ಯಾಥೋಲಿಕ್ ಚರ್ಚ್ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಆರ್ಡರ್ ಆಫ್ ಸೇಂಟ್ ಸಿಲ್ವೆಸ್ಟರ್ ಪೆÇೀಪ್ ನೈಟ್ ಪದವಿ ಪ್ರದಾನ ಮಾಡಲಾಗಿದೆ.
ಚರ್ಚ್ ಹಾಗೂ ಸಮಾಜ ಸೇವೆಯಲ್ಲಿ 32 ವರ್ಷಗಳ ನಿರಂತರ ಸೇವೆಯನ್ನು ಗುರುತಿಸಿ ಈ ಅಪರೂಪದ ಗೌರವ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅಸೆನ್ಶನ್ ಚರ್ಚ್‍ನಲ್ಲಿ ನವಜ್ಯೋತಿ ಪಬ್ಲಿಕೇಷನ್ಸ್ ಹಾಗೂ ಅಭಿಮಾನಿಗಳ ವತಿಯಿಂದ ವಿಶೇಷ ಸನ್ಮಾನ ಸಮಾರಂಭ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಬಿಷಪ್‍ಗಳು, ಪಾದ್ರಿಗಳು, ಸನ್ಯಾಸಿನಿಯರು, ಸರ್ಕಾರದ ಅಧಿಕಾರಿಗಳು ಹಾಗೂ ಭಕ್ತರು ಭಾಗವಹಿಸಿದ್ದರು.


ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾಡೋ ಮಾತನಾಡಿ, ಚೆವಲಿಯರ್ ನೈಜಲ್ ಫರ್ನಾಂಡಿಸ್ ಅವರಿಗೆ ದೊರೆತ ಗೌರವವು ಬೆಂಗಳೂರು ಮಹಾಧರ್ಮಪ್ರಾಂತ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು. ಅವರ ವಿನಯ, ಭಕ್ತಿ ಹಾಗೂ ಅಗತ್ಯವಿರುವವರಿಗೆ ನೀಡಿದ ಸಹಾಯ ಮನೋಭಾವವೇ ಈ ಸಾಧನೆಗೆ ಕಾರಣವಾಗಿದೆ ಎಂದು ಪ್ರಶಂಸಿಸಿದರು. ನ್ಯೂ ಲಿವಿಂಗ್ ಟ್ರಾನ್ಸ್‍ಲೇಶನ್ (ಕ್ಯಾಥೋಲಿಕ್ ಆವೃತ್ತಿ), ಇಂಗ್ಲಿಷ್ ಸ್ಟ್ಯಾಂಡರ್ಡ್ ವರ್ಶನ್ (ಕ್ಯಾಥೋಲಿಕ್ ಆವೃತ್ತಿ), ಲೆಕ್ಷನರಿ ಸೇರಿದಂತೆ ಹಲವು ಚರ್ಚ್ ಸಂಬಂಧಿತ ಪ್ರಕಟಣೆಗಳಲ್ಲಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
ಬೆಂಗಳೂರು ನಿವೃತ್ತ ಮಹಾಧರ್ಮಾಧ್ಯಕ್ಷ ಬರ್ನಾರ್ಡ್ ಮೊರಾಸ್ ಮಾತನಾಡಿ, ಪೆÇೀಪ್‍ನಿಂದ ನೇರವಾಗಿ ದೊರೆಯುವ ಈ ಗೌರವವು ಯೇಸು ಕ್ರಿಸ್ತನಿಂದಲೇ ದೊರೆಯುವ ಆಶೀರ್ವಾದದ ಸಮಾನವಾಗಿದೆ ಎಂದು ಅಭಿಪ್ರಾಯಪಟ್ಟರು. 1964ರಿಂದ ಎಟಿಸಿ ಪಬ್ಲಿಷರ್ಸ್ ಜೊತೆಗಿನ ತಮ್ಮ ದೀರ್ಘ ಸಂಪರ್ಕವನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ ಮಹಾಧರ್ಮಾಧ್ಯಕ್ಷರು ನೈಜಲ್ ಫರ್ನಾಂಡಿಸ್ ಅವರ ಜೀವನ ಸಾಧನೆಯನ್ನು ಒಳಗೊಂಡ “ಸ್ಟೀವರ್ಡ್ ಆಫ್ ಸೇಕ್ರೆಡ್ ಟೆಕ್ಸ್ಟ್ಸ್” ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಗೌರವ ಪತ್ರ ಪ್ರದಾನಿಸಿದರು.

ಮುನ್ನ ಬರ್ನಾರ್ಡ್ ಮೊರಾಸ್ ಅವರ ನೇತೃತ್ವದಲ್ಲಿ ಪವಿತ್ರ ಬಲಿ ಪೂಜೆ ನಡೆಯಿತು. ನೈಜಲ್ ಫರ್ನಾಂಡಿಸ್ ಅವರ ಪತ್ನಿ ಬ್ರೆಂಡಾ ಫರ್ನಾಂಡಿಸ್ ಹಾಗೂ ಪುತ್ರ ಕೆವಿನ್ ಜೋಶುವಾ ಸೇರಿದಂತೆ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.