ಪುತ್ತೂರು: ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ವಿಜಯದಶಮಿ ಮತ್ತು ಕಿಂಕಿಣಿ ಪೂಜೆ ಕಾರ್ಯಕ್ರಮ ಬುಧವಾರ ಪುತ್ತೂರಿನ ಬರೆಕರೆ ವೆಂಕಟ್ರಮಣ ಸಭಾಭವನದಲ್ಲಿ ನಡೆಯಿತು.
ಪರಕ್ಕಜೆ ವೇದಮೂರ್ತಿ ಮಹೇಶ ಭಟ್ಟರ ಪೌರೋಹಿತ್ಯದಲ್ಲಿ ವಿಜಯದಶಮಿ ಪೂಜೆ ನೆರವೇರಿತು. ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಅವರು ವಿದ್ಯಾರ್ಥಿಗಳಿಗೆ ಜ್ಜೆಯನ್ನು ನೀಡುವ ಮೂಲಕ ಹೊಸಬರಿಗೆ ನೃತ್ಯಾರಂಭಿಸಿದರು. ಇದಕ್ಕೂ ಮುನ್ನ ಬೃಹತ್ ನಟರಾಜ ವಿಗ್ರಹವನ್ನು ಬರೆಕರೆ ವಠಾರದಲ್ಲಿ ಮೆರವಣಿಗೆ ಮೂಲಕ ಸಭಾಭವನಕ್ಕೆ ಕರೆ ತರಲಾಯಿತು. ಈ ಸಂದರ್ಭ ಅಕಾಡೆಮಿ ಅಧ್ಯಕ್ಷ ಮಂಜುನಾಥ್ ಪಿ.ಎಸ್., ಉಪಾಧ್ಯಕ್ಷ ಡಾ.ಕೃಷ್ಣಕುಮಾರ್ ಪಿ.ಎಸ್, ಕಾರ್ಯದರ್ಶಿ ಆತ್ಮಭೂಷಣ್, ಜತೆ ಕಾರ್ಯದರ್ಶಿ ರಾಧೇಶ್ ಮತ್ತಿತರರು ಉಪಸ್ಥಿತರಿದ್ದರು. ವಿಜಯದಶಮಿ ಮತ್ತು ಕಿಂಕಿಣಿ ಪೂಜೆ ಕಾರ್ಯಕ್ರಮಕ್ಕೆ ಅಕಾಡೆಮಿಯ ವಿದ್ಯಾರ್ಥಿವೃಂದ ಭಾಗವಹಿಸಿತ್ತು.






















