Home ಜಿಲ್ಲೆ ಮೈಸೂರು ನೂತನ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ನೂತನ ಅಧ್ಯಕ್ಷರ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಸಂಜೆವಾಣಿ ವಾರ್ತೆ
ಕೆ.ಆರ್.ನಗರ,ಫೆ.13:-
ಪಟ್ಟಣದ ಹೆಸರಾಂತ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 2026-31ನೇ ಸಾಲಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ.ಎನ್.ಬಸಂತ್ ಹಾಗೂ ಉಪಾಧ್ಯಕ್ಷರಾಗಿ ಎಸ್.ಮಹದೇವಯ್ಯ ಅವಿರೋಧವಾಗಿ ಆಯ್ಕೆಯಾದರು.


ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ಜ.31ರಂದು ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ 13 ಮಂದಿಯೂ ಅವಿರೋಧವಾಗಿ ಆಯ್ಕೆಯಾದರು. ಇಂದು ಪಟ್ಟಣದ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ನಿಗದಿ ಪಡಿಸಲಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್.ಬಸಂತ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಮಹದೇವಯ್ಯ ಹೊರತು ಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವರುಗಳ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯ ಎಂ.ಎನ್.ಸೋಮಶೇಖರ್ ಪ್ರಕಟಿಸಿದರು.


ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಎಚ್.ಎಸ್.ಲೋಕೇಶ್, ಕೆ.ಎನ್.ರಮೇಶರಾವ್ ಕದಂ, ಅಶೋಕ ಕುಮಾರ್, ಸಿ.ಪಿ.ಎಸ್.ಲೋಕೇಶ್, ಹೆಚ್.ಟಿ.ಗೋಪಾಲೇಗೌಡ, ಜೆ.ವೆಂಕಟೇಶ್, ಡಾ.ಎಂ.ಪಿ.ಸುಮತಿ, ವೀಣಾ ಕುಮಾರ್, ಮರಿಲಿಂಗಾಚಾರ್, ಚೇತನ, ಎಲ್.ರಂಗನಾಥ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ವ್ಯವಸ್ಥಾಪಕ ಎಂ.ಪಿ.ಸುಹಾಸ್ ಗೌಡ ಇದ್ದರು.
ಈ ಸಂದರ್ಭದಲ್ಲಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮಶಂಕರ್, ಪುರಸಭಾ ಮಾಜಿ ಅಧ್ಯಕ್ಷರಾದ ತಮ್ಮನಾಯಕ, ಸುಬ್ರಹ್ಮಣ್ಯ, ಮಾಜಿ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಕೆ.ಎಲ್.ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಆಲ್ಪಾ ಕಾಲೇಜು ಕಾರ್ಯದರ್ಶಿ ವೈ.ಎಸ್.ಸುಬ್ರಮಣ್ಯ, ಮುಖಂಡರಾದ ಮೇಲೂರು ನಾರಾಯಣ್, ಜಯಂತ್, ಕೇಶವ್, ಮಹದೇವ್, ಕೇಬಲ್ ಮಂಜು, ಬಂಕ್ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಇದ್ದರು.