ನೀರು ನೀಡಿ ಇಲ್ಲ ಪರಿಹಾರ ಕೊಡಿಬಿಜೆಪಿಯಿಂದ ಬೃಹತ್ ಪ್ರತಿಭಟನೆ


* ಗಡಗಿ ಚೆನ್ನಪ್ಪ ಸರ್ಕಲ್ ಬಂದ್
* ಹಲವರ ಬಂಧನ
* ಎತ್ತಿನ ಬಂಡಿಗಳ ಸಮೇತ ಪ್ರತಿಭಟನೆ
* ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ತಂಗಡಿಗಿ ಪ್ರತಿಕೃತಿ ದಹನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.28:
ತುಂಗಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಎರಡನೇ ಬೆಳೆಗೆ ನೀರು ನೀಡಿ, ಇಲ್ಲಾ ಪರಿಹಾರ ಕೊಡಿ ಎಂದು ಆಗ್ರಹಿಸಿ ನಗರದಲ್ಲಿಂದು ಭಾರತೀಯ ಜನತಾ ಪಾರ್ಟಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯ್ತು.
ಸಿಎಂ ಸಿದ್ದರಾಮಯ್ಯ. ಡಿಸಿಎಂ ಡಿ.ಕೆ.ಶಿವಕುಮಾರ್, ತುಂಗಭದ್ರ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಸಜ್ ತಂಗಡಗಿಯ ಪ್ರತಿಕೃತಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ನಂತರ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯ್ತು.
ಎತ್ತಿನ ಗಾಡಿಯಲ್ಲಿ ಗಡಿಗಿ ಚೆನ್ನಪ್ಪ ಸರ್ಕಲ್ ಗೆ ಬಂದ
ಬಿಜೆಪಿ ಮುಖಂಡರು. ಮಾನವ ಸರಪಳಿ ಮೂಲಕ ಸರ್ಕಲ್ ಬಂದ್ ಮಾಡಲಾಯ್ತು.
ನೀರು ಕೊಡಿ, ನೀರು ಕೊಡಿ ಇಲ್ಲಾ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಕೊಡಿ ಎಂದು ಘೋಷಣೆ ಕೂಗಲಾಯ್ತು. ರೈತರಿಗೆ ಅಗತ್ಯವಾದ ನೀರು ನೀಡದ ರಾಜ್ಯ ಸರ್ಕಾರದ ವಿರುದ್ದವೂ ಘೋಷಣೆ ಕೂಗಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಎನ್. ರವಿಕುಮಾರ್, ವೈ.ಎಂ.ಸತೀಶ್, ನಗರದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಈ ವೇಳೆ ಮಾತನಾಡಿ.‌
ಕುರ್ಚಿ ಕಿತ್ತಾಟ ಬಿಡಿ ರೈತರ ಸಮಸ್ಯೆ ಕಡೆಗೆ ಗಮನ ಕೊಡಿ,
ಮುಂಗಾರಿನಲ್ಲಿ ಬೆಳೆದ ಮೆಕ್ಕೆಜೋಳಕ್ಕೆ
ಒಂದು ಕಡೆ ಬೆಲೆ ಕುಸಿದಿದೆ. ಮತ್ತೊಂದು ಕಡೆ ಜಲಾಶಯದಿಂದ ನೀರು ಬಿಡದೇ ಬೇಸಿಗೆ ಅವಧಿಯ ಭತ್ತ ಬೆಳಯಲು ನೀರಿಲ್ಲದೆ ರೈತರ ಸಂಕಷ್ಟ ಎದುರಿಸಬೇಕಾಗಿದೆ.
ಇಷ್ಟೇಲ್ಲ ತೊಂದರೆ ಇದ್ದರೂ ಇವತು ಕುರ್ಚಿ ಕಿತ್ತಾಟದ ಹಿನ್ನೆಲೆ ದೆಹಲಿ ಸುತ್ತುತ್ತಿದ್ದಾರೆ ಸಿದ್ದರಾಮಯ್ಯ, ಶಿವಕುಮಾರ್ ಅವರು. ಇವರಿಗೆ ರೈತರ ಹಿತ ಬೇಕಿಲ್ಲ ಎಂದು ಆರೋಪಿಸಿದರು.
ಪಕ್ಷದ ಮುಖಂಡರುಗಳಾದ ಕೆ.ಎ.ರಾಮಲಿಂಗಪ್ಪ, ಡಾ.ಎಸ್.ಜೆ.ವಿ.ಮಹಿಪಾಲ್, ಎಸ್. ಗುರುಲಿಂಗನಗೌಡ, ಗುತ್ತಿಗನೂರು ವಿರೂಪಾಕ್ಷಗೌಡ, ಗಣಪಾಲ್ ಐನಾಥರೆಡ್ಡಿ, ಹೆಚ್. ಹನುಂಮತಪ್ಪ ಡಾ.ಅರುಣಾ ಕಾಮಿನೇನಿ, ಗುರ್ರಂ ವೆಂಕಟರಮಣ, ಅನಿಲ್ ನಾಯ್ಡು, ಕೆ.ಎಸ್.ದಿವಾಕರ್, ಮೊದಲಾದವರು ಪಾಲ್ಗೊಂಡಿದ್ದರು.
ಸರ್ಕಲ್ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದರೆಂದು ಪೊಲೀಸರು ರವಿಕುಮಾರ್, ಅನಿಲ್ ನಾಯ್ಡು, ಸೋಮಶೇಖರ ರೆಡ್ಡಿ ಮೊದಲಾದವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.