
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ, ಸೆ.11: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು
ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಜನನಿ ಕಲಾ ಮತ್ತು ಸಾಂಸ್ಕೃತಿಕ ಸಂಘ (ರಿ.) ಹಾಗೂ ಜನನಿ ಸೇವಾ ಟ್ರಸ್ಟ್ (ರಿ.), ಇವರ ವತಿಯಿಂದ ನೀಡಲಾಗುವ 2026ನೇ ಸಾಲಿನ ‘ಜನನಿ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಉದ್ದೇಶ ತುಂಬಾ ಒಳ್ಳೆಯದು . ಇಂತಹ ಗೌರವಗಳು ಸಾಧಕರಿಗೆ ಮತ್ತಷ್ಟು ಉತ್ಸಾಹ ನೀಡುವುದರ ಜೊತೆಗೆ ಯುವಜನತೆ ಉತ್ತಮ ದಾರಿಯಲ್ಲಿ ಸಾಗಲು ಪ್ರೇರಣೆಯಾಗುತ್ತವೆ. ಸಮಾಜಕ್ಕಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿರಬೇಕು ಎಂದರು.
ಆಶಯ ನುಡಿಯಲ್ಲಿ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ. ಪರಮೇಶ್ವರಯ್ಯ ಸೊಪ್ಪಿಮಠ, ಸಾಧಕರನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭೆಯೊಂದಿಗೆ ನಿರಂತರ ಪರಿಶ್ರಮ, ಬದ್ಧತೆ ಹಾಗೂ ಸಮಾಜಮುಖಿ ಚಿಂತನೆ ಬೆಳೆಸಿಕೊಂಡಾಗ ಮಾತ್ರ ಶಾಶ್ವತವಾದ ಸಾಧನೆ ಸಾಧ್ಯ. ಪ್ರಶಸ್ತಿ ಎನ್ನುವುದು ಸಾಧನೆಯ ಅಂತ್ಯವಲ್ಲ; ಅದು ಮುಂದಿನ ಜವಾಬ್ದಾರಿಯ ಆರಂಭವಾಗಿದ್ದು, ಪುರಸ್ಕೃತರು ತಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಬೇಕು ಎಂದು ಹೇಳಿದರು.
ವಿಜಯನಗರ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಬುಡ್ಡಿ ಬಸವರಾಜ್, ಪ್ರಶಸ್ತಿಗಳಲ್ಲಿ ಯೋಗ ಮತ್ತು ಯೋಗ್ಯತೆಯ ಪ್ರಶಸ್ತಿಗಳೆಂಬ ಎರಡು ವಿಧಗಳಿವೆ. ಯೋಗದಿಂದ ಕೆಲವರಿಗೆ ಪ್ರಶಸ್ತಿ ದೊರೆಯಬಹುದು; ಆದರೆ ಪರಿಶ್ರಮ, ಪ್ರತಿಭೆ ಹಾಗೂ ಸಾಧನೆಯ ಮೂಲಕ ಯೋಗ್ಯತೆಯ ಗೌರವ ಗಳಿಸಿಕೊಳ್ಳುವುದಕ್ಕೆ ವಿಶೇಷ ಪರಿಶ್ರಮ ಅಗತ್ಯ. ತಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ದುಡಿದು ಸಾಧನೆ ಮಾಡಿದವರನ್ನು ಗುರುತಿಸುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿವೆ ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸೊನ್ನದ ಗುರುಬಸವರಾಜ್,
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ. ಕುಬೇರ,
ಮುಖಂಡ ಟಿ. ಮಹೇಂದ್ರ, ಮಾತನಾಡಿದರು
ಸಮಾರಂಭದಲ್ಲಿ ಏಳು ಸಾಧಕರಿಗೆ ‘ಜನನಿ ರತ್ನ’ ಪ್ರಶಸ್ತಿ ಗೌರವ ಪ್ರದಾನ ಮಾಡಿ ಗೌರವಿಸಲಾಯಿತು.
ಯಳಂದೂರಿನ ಪಿ. ಮಂಜುನಾಥ್ ಅವರಿಗೆ ‘ಜನನಿ ಜಾನಪದ ರತ್ನ’, ಕಂಪ್ಲಿಯ ಡಾ. ಎಂ.ಎಸ್. ಸಾವಿತ್ರಮ್ಮ ಅವರಿಗೆ ‘ಜನನಿ ಸಾಹಿತ್ಯ ರತ್ನ’, ಹೊಸಪೇಟೆಯ ಪರಮಣ್ಣ ದೊರೆ ಅವರಿಗೆ ‘ಜನನಿ ಸಹಕಾರ ರತ್ನ’, ಹಗರಿಬೊಮ್ಮನಹಳ್ಳಿಯ ಡಾ. ಜ. ಚಿದಾನಂದ ಅವರಿಗೆ ‘ಜನನಿ ಪಶುವೈದ್ಯ ರತ್ನ’, ಹಂಪಾಪಟ್ಟಣದ ಕೆ. ಸೋಮನಾಥ್ ಅವರಿಗೆ ‘ಜನನಿ ರಕ್ತದಾನಿ ರತ್ನ’, ಹಂಪಾಪಟ್ಟಣದ ಗಾಳೇಮ್ಯನವರ ದುರುಗಮ್ಮ ಅವರಿಗೆ ‘ಜನನಿ ಕೃಷಿ ರತ್ನ’ ಹಾಗೂ ಸಂಡೂರಿನ ಎಸ್. ಮಂಜುಳಾ ಅವರಿಗೆ ‘ಜನನಿ ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಎ. ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕ.ನಿ.ಪ. ಧ್ವನಿ ಅಧ್ಯಕ್ಷ ಜ. ಸೋಮನಾಥ, ನಿವೃತ್ತ ಸೈನಿಕ ಹಾಗೂ ಶಿಕ್ಷಕ ಪಿ. ಆಂಜನೇಯ, ಹಂಪಾಪಟ್ಟಣ ಗ್ರಾ.ಪಂ. ಅಧ್ಯಕ್ಷೆ ಪತ್ರಿ ಗೀತಾ ಯಲ್ಲಪ್ಪ, ಗಾಳಮ್ಮನವರ ಹುಲುಗಪ್ಪ, ವಿಎಸ್ಎಸ್ಎನ್ ಅಧ್ಯಕ್ಷರು, ಲೆಕ್ಕ ಪರಿಶೋಧಕ ಸರ್ಪಭೂಷಣ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಬಲ್ಲಾಹುಣಸಿ ನಾಗರಾಜ್, ವಿಎಸ್ಎಸ್ಎನ್ ಆಹಾರ ಗುಮಾಸ್ತ ಕೆ.ಎಸ್. ಹುಲುಗಪ್ಪ, ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಿಗ್ಗನಹಳ್ಳಿ ಬಸವರಾಜ್, ಸಂಘದ ಅಧ್ಯಕ್ಷ ಬಾವಿಕಟ್ಟಿ ವಿಶ್ವನಾಥ್, ವಿಎಸ್ಎಸ್ಎನ್ ಮಾಜಿ ಸದಸ್ಯ ಮುಂಡ್ರಿಗಿ ಮಂಜುನಾಥ್, ಶ್ರೀ ಶರಣ ಬಸವೇಶ್ವರ ಸಾಂಸ್ಕೃತಿಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಹೆಚ್. ಶಿವಾನಂದ, ಇಡಗುಂಜಿ ಶ್ರೀ ಮಹಾಗಣಪತಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ಲಕ್ಷ್ಮಣರಾವ್, ಕ.ರ.ವೇ. ಕಾವಲು ಪಡೆ ತಾಲೂಕು ಅಧ್ಯಕ್ಷ ಗೂಳಿ ಕೊಟ್ರೇಶ್, ಲಕ್ಷ್ಮಿ ಫಾರಂ ಪ್ರಸಾದ.ವೋದಯ ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ವಿ. ಹನುಮಂತ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಟಿ. ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಾಳೆಪ್ಪ, ಸಿ.ಎಲ್. ಕುಮಾರ್, ಮಂಜುಳಾ ಅಂಜಿನಪ್ಪ, ಎಸ್ಡಿಎಂಸಿ ಅಧ್ಯಕ್ಷ ಬಿ. ಮಂಜುನಾಥ್, ಮುಖಂಡ ಚಮಲಪ್ಪ, ಗೋಮಾತಾ ಕೊಟ್ರೇಶ್, ತಳವಾರ್ ಸೋಮನಾಥ್, ತೀರ್ಥಪ್ರಸಾದ್, ಖಾತರ ರೆಡ್ಡಿ, ಜಿಪಕೀರಪ್ಪ, ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಜಿ. ಶ್ರೀನಿವಾಸ, ಜಯ ಕರ್ನಾಟಕ ಗ್ರಾಮ ಘಟಕದ ಅಧ್ಯಕ್ಷ ಕೊಟ್ರೇಶ್ ಮಣಿಗಾರ್, ಬಳಿಗಾರ ಬಸವರಾಜ್, ಟಿ. ಸೋಮಶೇಖರ್ ಸೇರಿದಂತೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರೈತ ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.
ಹನುಮಂತ ನಿರೂಪಿಸಿದರು. ಜಿ. ಸಂಗೀತಾ ಪ್ರಾರ್ಥಿಸಿದರು. ಅಂಬಳಿ ವಿರೇಂದ್ರ ವಂದನಾರ್ಪಣೆ ನೆರವೇರಿಸಿದರು.
ಸಮಾರಂಭದ ಅಂಗವಾಗಿ ಎಸ್ಕೆಬಿ ಮೆಲೋಡೀಸ್ ತಂಡದಿಂದ ‘ರಸಮಂಜರಿ’ ಕಾರ್ಯಕ್ರಮ ಹಾಗೂ ಸಪ್ನಾ ಬಾವಿಕಟ್ಟಿ ಮತ್ತು ಸಾಕ್ಷಿ ಬಾವಿಕಟ್ಟಿ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.


























