
ಸಂಜೆವಾಣಿ ನ್ಯೂಸ್
ಮೈಸೂರು: ಜೂ.09:- ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಪರಿಸರ ಮಾಸಾಚರಣೆಯ ಅಂಗವಾಗಿ, ಬಿಲ್ಡರ್ಸ್ ಅಸೋಸಿಯೇಷನ್ ನ ಮಹಿಳಾ ಘಟಕ ಸ್ಪೂರ್ತಿ ಸಂಸ್ಥೆ ಆಯೋಜಿಸಿದ್ದ ವಾಕಥಾನ್ ನಿಸರ್ಗ ಪ್ರೇಮಿಗಳ ಉತ್ಸಾಹದ ಭಾಗವಹಿಸುವಿಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿದೆ.
ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರನ್ನು ಒಳಗೊಂಡ ಈ ತಂಡ ಪ್ರಕೃತಿಯ ಮಡಿಲಲ್ಲಿ ತಲ್ಲೀನರಾದ ದೃಶ್ಯ ಮನಸೆಳೆವಂತಿತ್ತು. ಎಲ್ಲರಿಗೂ ಅಚ್ಚುಕಟ್ಟಾದ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವಾಕಥಾನ್ ಬೆಟ್ಟದ ಬುಡದಿಂದ 6 ಗಂಟೆಗೆ ಫ್ಲಾಗ್ ಆಫ್ ಮಾಡುವುದರೊಂದಿಗೆ ಪ್ರಾರಂಭವಾಯಿತು. ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಡಿಆರ್‍ಎಫ್‍ಒ ಸತೀಶ್ ಗಿಡ ನೆಡುವ ಮೂಲಕ ವಾಕಥಾನ್ ಸಮಾರೋಪ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸಂಸ್ಥೆಯ ಅಧ್ಯಕ್ಷೆ ಕವಿತಾ ಗುರುರಾಜ್, ಬಿಏಇ ಅಧ್ಯಕ್ಷ ವಿ.ಶ್ರೀನಾಥ್, ಡಬ್ಲ್ಯೂಇಎಂ ಅಧ್ಯಕ್ಷ ಪ್ರಭಾಕರ್ ರಾವ್, ಪದಾಧಿಕಾರಿಗಳು, ಎರಡೂ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಚಾಲಕಿ ವೀಣಾ ಅಶೋಕ್ ವಂದನಾರ್ಪಣೆ ಯೊಂದಿಗೆ ವಾಕಥಾನ್ ಸಂಪೂರ್ಣಗೊಂಡಿತು.