ನಿಶ ಮುಕ್ತ ಬೆಂಗಳೂರು ಪ್ರಮಾಣ

ಕೆಆರ್ ಪುರ,ಜೂ.2- ಯುವಜನತೆ ಭವಿಷ್ಯದ ಬಗ್ಗೆ ಯೋಚನೆ ಮಾಡದೆ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದರು.

ಕಾಶಿಯನ್ ಫೌಂಡೇಶನ್ ವತಿಯಿಂದ ಕೆಆರ್ ಪುರದ ಎಸ್ ಜೆಇಎಸ್ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಿಶಮುಕ್ತ ಬೆಂಗಳೂರು ಪ್ರಮಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದ ಆಧಾರಸ್ತಂಭವಾಗಿರುವ ಯುವ ಪೀಳಿಗೆಯನ್ನು ನಿಶ ಮುಕ್ತ ಮಾಡಲು ಎಲ್ಲರೂ ಕೈ ಜೋಡಿಸಿ , ನಿಶದಿಂದ ಯುವಜನತೆಯನ್ನು ಹೊರತರಲು ಪ್ರಾಮಾಣಿಕ ಕಾರ್ಯನಿರ್ವಹಿಸುವ ತಂಡದೊಂದಿಗೆ ಸದಾ ಸಹಕರಿಸಬೇಕು ಎಂದರು.

ನಶೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗುತ್ತಿದ್ದರು,ಸಹ ಯುವ ಜನತೆ ನಶೆಯತ್ತ ನಡೆಯುತ್ತಿರುವುದು ಬೇಸರ ಮೂಡಿಸುತ್ತದೆ ಅವರನ್ನು ಸಾಕ್ಷರತೆ ಕಡೆಗೆ ತರುವ ಕೆಲಸ ಮಾಡಬೇಕು,ಮನಸ್ಸಿನ ದಿಟ್ಟ ನಿರ್ಧಾರ ತೆಗೆದುಕೊಳ್ಳಲುವ ಮೂಲಕ ಪ್ರಮಾಣ ಮಾಡಬೇಕು ಎಂದು ಹೇಳಿದರು.

ಮೇ 31 ತಂಬಾಕು ರಹಿತ ದಿನ, ಭಾರತದಲ್ಲಿ ಶೇ 60 ರಷ್ಟು ಮಂದಿ ತಂಬಾಕಿಗೆ ಒಳಗಾಗಿದ್ದಾರೆ ಈ ಚಟದಲ್ಲಿ ಬಿದ್ದವರಿಗೆ ಮಕ್ಕಳಾಗೋದಿಲ್ಲ, ಗರ್ಭದ ತೊಂದರೆ , ಕ್ಯಾನ್ಸರ್‍ಸೇರಿದಂತೆ ಹಲವು ರೋಗಗಳು ಬರುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಶಿಯನ್ ಪೌಂಢೇಷನ್ ನ್ಯಾಷನಲ್ ಜನರ್ ಸೆಕ್ರೇಟ್ರಿ ದುರ್ಗೇಶ್ ಯಾದವ್, ಫೌಂಡರ್ ಸುಮೀತ್ ಅಂಕೂರ್ ಸಿಂಗ್, ಕಾಲೇಜು ಚೇರಮನ್ ಕೆ.ಎ.ನಾಗರಾಜ್, ನಾಗೇಶ್ ಗೌಡ, ಕರವೇ ಕೃಷ್ಣಮೂರ್ತಿ ಮತ್ತಿತರರಿದ್ದರು.