Home ಜಿಲ್ಲೆ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ವಂಚಿಸಿರುವವರ ವಿರುದ್ದ ಕ್ರಮಕ್ಕೆ ಆಗ್ರಹ

ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ವಂಚಿಸಿರುವವರ ವಿರುದ್ದ ಕ್ರಮಕ್ಕೆ ಆಗ್ರಹ

ಸಂಜೆವಾಣಿ ವಾರ್ತೆ

ಸಂಡೂರು, ಮೇ.26:  ಸಂಡೂರು ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಸ.ನಂ.  250/1 ಹಾಗೂ 242/ಂಃ  ರಲ್ಲಿ ಹುಬ್ಬಳ್ಳಿ ಮೂಲದ ಶುಜಾತ್ ಅಲಿ ಮನಿಯಾರ್ ಹಾಗೂ ನೌಶೀನ್ ಎಸ್ ಮನಿಯಾರ್ ಎಂಬ ದಂಪತಿಗಳು ಕಳೆದ ದಿನಾಂಕ 14.03.2025 ರಂದು ಸದರಿ ಗ್ರಾಮದ ಮೂಲಿಮನಿ ತಿಪ್ಪೇಸ್ವಾಮಿ ತಂದೆ ಎಂ.ದೊಡ್ಡಪ್ಪ ಎನ್ನುವವರು ಜಮೀನು ಖರೀದಿಸಿ ನಿವೇಶನ ಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು,ಉಳಿದ ನಿವೇಶನ ಗಳನ್ನು ಮಾರಾಟ ಮಾಡದೇ ಸುಮಾರು 45 ಲಕ್ಷ ರೂಪಾಯಿ ಹಣವನ್ನು ಪಡೆದು ನಂತರ ವಂಚಿಸಿ ಪರಾರಿಯಾಗಿದ್ದಾರೆ.ಬಡವರು ತಾವು ಖರೀದಿಸಿರುವ ನಿವೇಶನಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಮೂಲ ಭೂ ಮಾಲೀಕರಾದ ಮೂಲಿಮನಿ ತಿಪ್ಪೇಸ್ವಾಮಿ ಅವರು ಖರೀದಿದಾರರನ್ನು ತಡೆದು ಲೇಔಟ್ ಗೆ ಬೀಗ ಹಾಕಿದ್ದಾರೆ.ಬೀಗ ಹಾಕಿ ಎಂಟು ತಿಂಗಳು ಕಳೆದಿವೆ. ಅಂದಿನಿಂದ ಎರಡು ಬಾರಿ ಮೂಲ ಭೂ ಮಾಲೀಕರಾದ ಮೂಲಿಮನಿ ತಿಪ್ಪೇಸ್ವಾಮಿ ಹತ್ತಿರ ಚರ್ಚೆ ನಡೆಸಿ ನಿವೇಶನ ಗಳನ್ನು ಬಿಟ್ಟು ಕೊಡಲು ಮನವಿ ಮಾಡಿದರೂ ಬಿಟ್ಟು ಕೊಡದೇ ಹೆಚ್ಚುವರಿಯಾಗಿ 18 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಈಗಾಗಲೇ ಲೇಔಟ್ ನಿರ್ಮಾಣ ಮಾಡಿರುವವರಿಗೆ ಒಂದು ನಿವೇಶನಕ್ಕಾಗಿ 3.50 ಲಕ್ಷ ರೂಪಾಯಿ ಹಣವನ್ನು ಸಂಪೂರ್ಣವಾಗಿ ನೀಡಿದ್ದೇವೆ.ಈಗ ಹೆಚ್ಚುವರಿಯಾಗಿ 18 ಲಕ್ಷ ನೀಡಲು ಬಡ ಕುಟುಂಬಗಳಿಗೆ ಸಾಧ್ಯವಿಲ್ಲ ,ಇತ್ತ ನಿವೇಶನಗಳು ಇಲ್ಲ, ಕೊಟ್ಟ ಹಣವು ವಾಪಸ್ ಸಿಗದೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ, ಸಾಮಾನ್ಯ ಅಧಿಕಾರ ಪತ್ರವನ್ನು ಇಬ್ಬರೂ ಕರಾರು ಮಾಡಿಕೊಂಡು ಈಗ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ನಡೆದುಕೊಂಡು ದೌರ್ಜನ್ಯ ಮಾಡುತ್ತಿದ್ದಾರೆ.ಅಮಾಯಕ ಬಡ ಕುಟುಂಬಗಳು ಕಷ್ಟ ಪಟ್ಟು ಸಾಲ ಮಾಡಿ ಖರೀದಿಸಿರುವ ನಿವೇಶನಗಳನ್ನು  ನೀಡಲು ಕರ್ನಾಟಕ ಪ್ರಾಂತ ರೈತ ಸಂಘವು ಸಹಾಯಕ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದೆ.