ನಿರಂತರ ಮಳೆಗೆ ಮನೆಗಳಿಗೆ ಹಾನಿ ಒಂದು ಟಗರು ಸಾವು.


ಸಂಜೆವಾಣಿ ವಾರ್ತೆ
ಸಿರಿಗೇರಿ ಮೇ.22.
ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದಲ್ಲಿ ಮತ್ತು ಹೋಬಳಿಯಲ್ಲಿ ಸತತ ಮೂರು ದಿನಗಳಿಂದ ಬೆಳಗ್ಗೆ ಅಥವಾ ರಾತ್ರಿ ಹೊತ್ತು ಬರುತ್ತಿರುವ, ನಿರಂತರ ಮಳೆಗೆ ಗ್ರಾಮದ 4ನೇ ವಾರ್ಡಿನ, ಜಾಡರ ಶ್ರೀನಿವಾಸ ಎಂಬುವವರ ಮನೆ ಭಾಗಶಃ ಬಿದ್ದು ಹಾನಿಯಾಗಿದೆ. ಮನೆ ಮುಂದೆ ಇದ್ದ ಒಂದು ಟಗರುಮರಿ ಸಾವನ್ನಪ್ಪಿದೆ. ಇದಲ್ಲದೆ ಸಿರಿಗೆರೆ ಸಮೀಪದ ದಾಸಪರ ಗ್ರಾಮದಲ್ಲಿ ಈರಣ್ಣ ಮತ್ತು ರುದ್ರಮ್ಮ ಎಂಬುವವರ ಮನೆಗಳು ಬಿದ್ದು ಹಾನಿಗೊಳಗಾಗಿವೆ. ವಿಷಯ ತಿಳಿದು ಗ್ರಾಮ ಲೆಕ್ಕಾಧಿಕಾರಿ ಶಿವಪುತ್ರ ಮತ್ತು ಪಶು ಚಿಕಿತ್ಸಾ ಇಲಾಖೆಯ ಪಶು ಪರೀಕ್ಷಕರಾದ ದೇವೇಂದ್ರಪ್ಪ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡು, ಸಂಬಂಧಿಸಿದ ಇಲಾಖೆಯಿಂದ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.