ನಿದ್ರಾಹೀನತೆಗೆ ಮನೆಮದ್ದು

೧. ಹೂವನ್ನು ಹೊಟ್ಟೆಗೆ ಸೇವಿಸುವುದರಿಂದ ಅಥವಾ ಹೂವನ್ನು ತಲೆಯಲ್ಲಿ ಮುಡಿಯುವುದರಿಂದಸುಖವಾಗಿ ನಿದ್ದೆ ಬರುತ್ತದೆ.

೨. ಬಾಳೆಹಣ್ಣನ್ನು ಸಿಪ್ಪೆಸಹಿತವಾಗಿ ಕತ್ತರಿಸಿ ೧ ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧ ಇಂಗಿದನಂತರಶೋಧಿಸಿಕೊಂಡು ಕುಡಿಯುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.

೩. ಸಬ್ಬಸ್ಸಿಗೆ ಸೊಪ್ಪಿನ ೨ ಕಡ್ಡಿಯನ್ನು ಮಲಗುವದಿಂಬಿನ ಹತ್ತಿರ ಇಟ್ಟು ಮಲಗಿದರೆ ಅದರ ವಾಸನೆಗೆ ಚೆನ್ನಾಗಿ ನಿದ್ರೆ ಬರುತ್ತದೆ.

೪. ಬಿಸಿಮಾಡಿದ ಹರಳೆಣ್ಣೆಯನ್ನು ಕಣ್ಣಿನ ರೆಪ್ಪೆಯ ಮೇಲೆ ಸವರಿ ಮಲಗಿದರೆ ಸುಖವಾಗಿ ನಿದ್ರೆ ಬರುತ್ತದೆ.

೫. ಕೊತ್ತಂಬರಿ ಸೊಪ್ಪಿನ ರಸಕ್ಕೆ ಸಕ್ಕರೆಯನ್ನು ಹಾಕಿ ಚೆನ್ನಾಗಿ ಪಾಕ ಬರುವವರೆಗೆ ಕುದಿಸಿ, ಆರಿಸಿ, ಗಾಜಿನ ಸೀಸೆಗೆ ಹಾಕಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ೨ ಚಮಚ ಈ ಸಿರಪ್ ಅನ್ನು ನೀರಿಗೆ ಸೇರಿಸಿ ಷರಬತ್ತು ಮಾಡಿಕೊಂಡು ಕುಡಿದರೆ

ಚೆನ್ನಾಗಿ ನಿದ್ರೆ ಬರುತ್ತದೆ.

೬. ಮಲಗುವ ಮುನ್ನ ಬಿಸಿನೀರಿನ ಸ್ನಾನ ಮಾಡಿ ಬಿಸಿ ಹಾಲು ಕುಡಿದು ಮಲಗಿ ಸುಖವಾದ ನಿದ್ರೆ ಬರುತ್ತದೆ.

೭. ರಾತ್ರಿ ಮಲಗುವಾಗ ಅಂಗಾತ ಮಲಗಿ ದೀರ್ಘವಾಗಿ ಉಸಿರಾಟ ಮಾಡಿ, ಹಲವಾರು ಬಾರಿ ಮಾಡಿ ನಂತರ ಎಡಪಕ್ಕಕ್ಕೆ ತಿರುಗಿ ಮಲಗಿದರೆ ನಿದ್ರೆ ಬರುತ್ತದೆ.

೮. ಹುರುಳಿಕಾಳಿನ ಸಾರನ್ನು ತಿಂದರೆ ಸೊಗಸಾಗಿ ನಿದ್ರೆ ಬರುತ್ತದೆ.

೯. ವಾರಕ್ಕೊಮ್ಮೆ ಅಭ್ಯಂಗ ಸ್ನಾನ ಮಾಡುವುದರಿಂದ ಸೊಗಸಾಗಿ ನಿದ್ರೆ ಬರುತ್ತದೆ.

೧೦. ಹೆಸರುಬೇಳೆ ಪಾಯಸ ಮಾಡಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ.

೧೧. ಗಸಗಸೆ ಪಾಯಸ ಮಾಡಿ ಕುಡಿಯುವುದರಿಂದಲೂ ನಿದ್ರೆ ಚೆನ್ನಾಗಿ ಬರುತ್ತದೆ.

೧೨. ಸೌತೆಕಾಯಿಯನ್ನು ಅಥವಾ ಅದರ ತಿರುಳನ್ನು ಅಂಗಾಲಿಗೆ ಚೆನ್ನಾಗಿ ಹಾಕಿ ಉಜ್ಜಿದರೆ ನಿದ್ರೆ ಬರುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಟ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ

೨.ಡಾ.ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ .

೯೫೩೫೩೮೩೯೨೧ ೯೫೩೫೩೮೩೯೨೧