ನಾಳೆ 106ನೇ ಮೈಸೂರು ವಿವಿ ಘಟಿಕೋತ್ಸವ

ಸಂಜೆವಾಣಿ ನ್ಯೂಸ್
ಮೈಸೂರು:ಜ.04:-
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸೇರಿ ಮೂವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ಘೋಷಿಸಿದ್ದು, 30966ಮಂದಿಗು ನಾಳೆ ನಡೆಯುವ ಮೈಸೂರು ವಿಶ್ವವಿದ್ಯಾನಿಲಯದ 106ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನದ ಗೌರವ ನಡೆಯಲಿದೆ.


ಈ ಕುರಿತು ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪೆÇ್ರ.ಎನ್.ಕೆ.ಲೋಕನಾಥ್ ಮಾತನಾಡಿ, 26 ಮಂದಿಯ ಹೆಸರನ್ನು ಗೌರವಡಾಕ್ಟರೇಟ್ ಗೆ ಆಯ್ಕೆ ಸಮಿತಿ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಈ ಪೈಕಿ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶಾಮ್ ಭಟ್, ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಪಿ.ಜಯಚಂದ್ರ ರಾಜು ಅವರಿಗೆ ಈ ಸಾಲಿನ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದರು.
ಈ ಸಾಲಿನಲ್ಲಿ ಶೇ.60.10ರಷ್ಟು 18612ಮಂದಿ ಮಹಿಳಾ ಮತ್ತು ಶೇ.46.99ರಷ್ಟು ಪುರುಷರು ಸೇರಿ ಒಟ್ಟು 30966 ಮಂದಿ ಪದವಿ ಪಡೆವರು. ವಿವಿಧ ವಿಷಯದಲ್ಲಿ ಒಟ್ಟು 211 ಮಹಿಳೆಯರು ಮತ್ತು 238 ಪುರುಷರು ಸೇರಿ ಒಟ್ಟು 449 ಮಂದಿ ಪಿಎಚ್ ಡಿ ಪದವಿ ಪಡೆಯುವರು. ಒಟ್ಟು 442 ಪದಕ, 197 ಬಹುಮಾನ, 213 ಅಭ್ಯರ್ಥಿಗಳು ಪಡೆಯಲಿದ್ದು, ಈ ಪೈಕಿ 158 ಮಂದಿ ಮಹಿಳೆಯರೇ ಇದ್ದಾರೆ ಎಂದು ವಿವರಿಸಿದರು.


5596 ಮಂದಿ ಸ್ನಾತಕೋತ್ತರ ಪದವಿ ಪಡೆಯಲಿದ್ದು, ಈ ಪೈಕಿ 3551 ಮಂದಿ ಮಹಿಳೆಯರಿದ್ದು, 24721 ಸ್ನಾತಕ ಪದವಿ ಪ್ರಧಾನದಲ್ಲಿ 14850 ಮಂದಿ ಮಹಿಳೆಯರ ಪಾರಮ್ಯವಿದೆ. ಒಟ್ಟು ಕಲಾ, ವಾಣಿಜ್ಯ, ಶಿಕ್ಷಣ, ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಇಂಜಿನಿಯರಿಂಗ್ ನಿಕಾಯದ ವಿದ್ಯಾರ್ಥಿಗಳು ಪದವಿ ಪಡೆಯುವರು ಎಂದು ಹೇಳಿದರು.
ವಿಜ್ಞಾನ ಮತ್ತು ಇತರ ತಂತ್ರಜ್ಞಾನ ವಿಭಾಗದಲ್ಲಿ ಎನ್. ಅದಿತಿ 24ಪದಕ ಮತ್ತು 8 ಬಹುಮಾನ ಪಡೆದಿದ್ದು, ಪುನೀತ್ 6 ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಬಿ.ಎಸ್.ವರ್ಣಿಕಾ ಪದಕ ಮತ್ತು 6 ನಗದು ಬಹುಮಾನ, ಎಂ.ಎ. ಕನ್ನಡ ವಿಭಾಗದಲ್ಲಿ ಚಂದ್ರಶೇಖರ 13 ಪದಕ ಮತ್ತು 2 ನಗದು, ಭಾಷಾಶಾಸ್ತ್ರ ವಿಭಾಗದಲ್ಲಿ 6 ಪದಕ ಮತ್ತು 2 ನಗದು ಬಹುಮಾನ ಸೇರಿ ಅನೇಕರು ಟಾಪರ್ ಸಹ ಆಗಿದ್ದಾರೆ ಎಂದರು.


ಆದಾಯ ಕುಂಠಿತ: ಹಾಸನ, ಚಾಮರಾಜನಗರ ಸೇರಿ ಎಲ್ಲಾ ಜಿಲ್ಲೆಗಳಲ್ಲಿ ವಿಶ್ವ ವಿದ್ಯಾನಿಲಯಗಳು ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ನಮ್ಮಲ್ಲಿನ ಆದಾಯ ಕುಂಠಿತವಾಗಿದೆ. ಇಲ್ಲಿರುವವರನ್ನು ಖಾಯಂ ಮಾಡುವಂತೆ ಸರ್ಕಾರಕ್ಕೂ ಪತ್ರ ವ್ಯಚಹಾರ ನಡೆಸಲಾಗಿದೆ. ಅಲ್ಲದೆ ಆದಾಯ ಕುಂಠಿತವಾಗಿ ಖರ್ಚು ಹಿಂದಿನಷ್ಟೇ ಇದೆ. ಹೀಗಾಗಿ 12 ವರ್ಷದಿಂದ ಯಾವುದೇ ನೇಮಕಾತಿ ಪ್ರಕ್ರಿಯೆ ಆಗಿಲ್ಲ. ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಪ್ರತಿಕ್ರಯಿಸಿದರು. ಪರೀಕ್ಷಾಂಗ ಕುಲಸಚಿವ ಪೆÇ್ರ.ನಾಗರಾಜ್ ಉಪಸ್ಥಿತರಿದ್ದರು.