
ಸಂಜೆವಾಣಿ ನ್ಯೂಸ್
ಮೈಸೂರು: ಜ.29:- ಮಹಾತ್ಮ ಗಾಂಧಿ ಹುತಾತ್ಮರಾದ ಜ.30ರಂದು ಸಾಂಸ್ಕೃತಿಕನಗರಿ ಮೈಸೂರು ನಗರದಲ್ಲಿ ಸೌಹಾರ್ದ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ನಗರದ ಪತ್ರಕರ್ತರ ಭೌನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸೌಹಾರ್ದ ಕರ್ನಾಟಕದದ ಸಂಯೋಜಕಪೆÇ್ರ. ಕಾಳಚನ್ನೇಗೌಡ, ಜಾತಿ ಮತಗಳ ಹೆಸರಿನಲ್ಲಿ ಸಮಾಜದ ಶಾಂತಿ ಸಹಭಾಳ್ವೆಯನ್ನು ಕದಡುವ ಸಂಕುಚಿತವಾದಿ ಛಿದ್ರಕಾರಿ ಶಕ್ತಿಗಳು ಸಮಾಜದಲ್ಲಿ ಮೇಲುಗೈ ಸಾಧಿಸುತ್ತಿರುವುದು ಆಂತಕ ಮೂಡಿಸಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ ಕರ್ನಾಟಕ ಮತ್ತು ದೇಶವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ನಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ. ಐಕ್ಯತೆಗಾಗಿ, ಕೋಮು ಸೌಹಾರ್ದದ ಮೌಲ್ಯಗಳಿಗಾಗಿ ಜೀವ ತೆತ್ತವರು ಮಹಾತ್ಮ ಗಾಂಧಿ. ಈ ಹಿನ್ನಲ್ಲೆಯಲ್ಲಿ ಸೌಹಾರ್ದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಸಂತ ಫಿಲೋಮಿನಾಸ್ ಚರ್ಚ್‍ನಿಂದ ಸೌರ್ಹಾದ ನಡಿಗೆ ಆರಂಭಗೊಂಡು ಅಜಾಮ್ ಪಾರ್ಕ್, ಅಶೋಕ ರಸ್ತೆ ಮೂಲಕ ಟೌನ್ ಹಾಲ್‍ನ ಅಂಬೇಡ್ಕರ್ ಪ್ರತಿಮೆವರೆಗೆ ಪಾದಯಾತ್ರೆ ನಡೆಯಲಿದ್ದು, ಚಿಕ್ಕಗಡಿಯಾರದಲ್ಲಿ ಸೌಹಾರ್ದ ಗೀತಗಾಯನ, ಭಾಷಣ ನಡೆಯಲಿದೆ.
ಪ್ರಗತಿಪರ ಸಂಘಟನೆಗಳು, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕೇಂದ್ರ ಕಾರ್ಮಿಕ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಭಾರತ ವಿದ್ಯಾರ್ಥಿ ಫೆಡರೇಷನ್, ಇನ್ಸಾಫ್ ಮೈಸೂರು, ಕನ್ನಡ ಪರ ಸಂಘಟನೆಗಳು, ಸಮುದಾಯ ಮೈಸೂರು, ಹವ್ಯಾಸಿ ರಂಗ ತಂಡಗಳು ಭಾಗಿಯಾಗಲಿವೆ. ಮಾಧ್ಯಮಗೋಷ್ಠಿಯಲ್ಲಿ ಸಂಯೋಜಕರಾದ ಜಗದೀಶ್ ಸೂರ್ಯ, ಸವಿತ ಪ.ಮಲ್ಲೇಶ್, ನೂರ್ ಮರ್ಚೆಂಟ್, ವರಳ್ಳಿ ಆನಂದ್, ಗಜೇಂದ್ರ ಚಿನ್ನಸ್ವಾಮಿ, /ಡಿ.ಅಭಿ ಇತರರು ಹಾಜರಿದ್ದರು.

























