
ಸಂಜೆವಾಣಿ ವಾರ್ತೆ
ಕೊಟ್ಟೂರು, ಜ.15 ಗುರುವಾರದಂದು ಶ್ರೀ ಕಾಯಕಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿ ಮೆರವಣಿಗೆಯೊಂದಿಗೆ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಭೋವಿ ಸಮಾಜದ ಉದ್ಯಮಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಮತ್ತು ಪಿ.ಹೆಚ್ ದೊಡ್ಡ ರಾಮಣ್ಣ ತಿಳಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಬಾರಿ ತಾಲೂಕು ಕಚೇರಿಯಲ್ಲಿ ಕಾಯಕಯೋಗಿ ಸಿದ್ದರಾಮೇಶ್ವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಎಪಿಎಂಸಿ ಆವರಣದ ಗಣೇಶ ದೇವಸ್ಥಾನದಿಂದ ಗುರು ಕೊಟ್ಟೂರೇಶ್ವರ ದೇವಸ್ಥಾನದವರೆಗೂ ಅದ್ದೂರಿ ಮೆರವಣಿಗೆ ನಡೆಸಲಾಗುವುದು ಈ ಮೆರವಣಿಗೆಗೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಪೀಠದ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು, ಮತ್ತು ಪೂಜ್ಯ ಶ್ರೀ ಮಹೇಶ್ವರ ಸ್ವಾಮಿಗಳು ಶ್ರೀ ಕ್ಷೇತ್ರ ನಂದಿಪುರ ಚಾಲನೆ ನೀಡಲಿದ್ದಾರೆ ಎಂದರು
ಈ ಬೃಹತ್ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಬಲ, ಡಿ.ಜೆ ಇರಲಿದೆ. ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಸುಮಾರು 3 ರಿಂದ 4 ಸಾವಿರ ಬೋವಿ ಸಮಾಜದವರು ಸೇರುವ ನಿರೀಕ್ಷೆ ಇದೆ ಇಂತಹ ಕಾರ್ಯಕ್ರಮಗಳು ಮಾಡುವುದರಿಂದಾಗಿ ಸಮುದಾಯದ ಜನರಲ್ಲಿ ಜಾಗೃತಿ ಮೂಡಿ ಸಂಘಟಿತರಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರುಗಳಾದ ಪಿ ಎಚ್.ಆಂಜಿನೇಯ, ಪರಮೇಶ್, ಪಿ. ಕೆ. ಇಂದ್ರಜಿತ್, ರಾಘವೇಂದ್ರ, ಬಸವರಾಜಪ್ಪ, ಮಂಜುನಾಥ, ಸುಂಕಪ್ಪ, ಕೊಟ್ರೇಶ್, ಮುಂತಾದವರು ಇದ್ದರು.






















