ಸಂಜೆವಾಣಿ ವಾರ್ತೆ
ಮೈಸೂರು, ಸೆ.11- ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಛೇರಿಯು ಇದೇ ತಿಂಗಳು 13 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ನಿವೃತ್ತ ಡಿಜಿಪಿ ಹಾಗೂ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿಮಾಣ ಸಹಕಾರ ಸಂಘದ ಅಧ್ಯಕ್ಷ ಎಲ್. ರೇವಣ್ಣಸಿದ್ದಯ್ಯ ತಿಳಿಸಿದರು.
ಅವರು ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿಮಾಣ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು ಹಾಗೂ ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸುತ್ತೂರು ಮಠದ ಮೂಲಕ ಸಾಮಾಜಿಕ ಮತ್ತು ಧಾರ್ಮಿಕ ಕಾಂiÀರ್iಗಳ ಮೂಲಕ ಬಹಳ ಪ್ರಖ್ಯಾತಿಯನ್ನು ಹೊಂದಿದೆ. ಸದರಿ ಸಂಸ್ಥೆಯ ಸಾಮಾಜಿಕ ಕಳಕಳಿಯ ಪರಂಪರೆಯನ್ನು ಮುಂದುವರೆಸುವ ಉದ್ದೇಶಕ್ಕಾಗಿ ಹಾಗೂ ಅವರ ಸೇವೆಯನ್ನು ನಮ್ಮದೇ ಆದ ರೀತಿಯಲ್ಲಿ ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ನಾನು ಶರಣತತ್ವಕ್ಕೆ ಅನುಗುಣವಾಗಿ ವಿಶೇಷವಾದ ಸೇವೆ ಸಲ್ಲಿಸುವ ಮೂಲಕ ಯಾವುದೇ ಫಲಾನುಭವವನ್ನು ಪಡೆಯದೆ ಶ್ರೀಮಠದ ಸೇವೆಯಲ್ಲಿ ಸಲ್ಲಿಸುತ್ತಿದ್ದೇನೆ. ಹಿಂದೆ ಜೆಎಸ್‍ಎಸ್ ಸಂಸ್ಥೆಯಲ್ಲಿ ಹಾಗೂ ಕೆಳವರ್ಗದವರು, ಗ್ರಾಮೀಣ ವರ್ಗದವರು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವಾಗಿರುವವರಿಗೆ ಉತ್ತಮ ವಿದ್ಯಾಭ್ಯಾಸ ಕಲ್ಪಿಸಿಕೊಳ್ಳಲು ಸಹಕಾರ, ಮಾರ್ಗದರ್ಶನವನ್ನು ಹಾಗೂ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರು ಮುಂದೆ ಬರಲು ಸಹಾಯವಾಗಿದೆ.
ಈ ದಿಸೆಯಲ್ಲಿಬಡವರುಜೆಎಸ್‍ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಸ್ಥಾಪಿತವಾಗಿತನ್ನದೇ ಹಿರಿಮೆಗಳನ್ನು ಸಾಧಿಸಿ ಪ್ರಕಾಶಗೊಂಡಂತೆ, ಇದರಜೊತೆಜೊತೆಯಾಗಿಯೇಎಂಬಂತೆ ಗೃಹ ನಿರ್ಮಾಣ ಸಂಘವೂ 08.03.2006ರಲ್ಲಿ ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959ರ ಕಲಂ.7ರ ಅನ್ವಯ, ನೋಂದಣಿ ಸಂಖ್ಯೆ31435/2005-06 ರಲ್ಲಿ ಸ್ಥಾಪನೆಗೊಂಡಿತು.
ಸಂಘವು ಪ್ರಾರಂಭದಿಂದv Àಹಲ್‍ವರೆವಿಗೂ ಲಾಭದಲ್ಲೇ ನಡೆಯುತ್ತಿದ್ದು ಪ್ರತೀ ವರ್ಷವೂ ಆಡಿಟ್ ಇಲಾಖೆಯಿಂದ ಎ ಶ್ರೇಣಿ ಸಂಘವೆಂದು ದೃಢೀಕರಣ ಪಡೆದಿರುತ್ತದೆ.
ಇದರ ಕಾರ್ಯವ್ಯಾಪ್ತಿಯು ಕರ್ನಾಟಕ ರಾಜ್ಯದ 17 ಜಿಲ್ಲೆಗಳಿಗೆ ವ್ಯಾಪಿಸಿರುತ್ತದೆ.ಇದರ ಮುಖ್ಯಉದ್ದೇಶವು ಸದಸ್ಯರ ಆರ್ಥಿಕ ಹಿತಾಶಕ್ತಿಗೆ ಉತ್ತೇಜನ ನೀಡುವುದು, ಮಿತವ್ಯಯ, ಉಳಿತಾಯ ಮತ್ತು ಸ್ವಸಹಾಯ ಮನೋಭಾವನೆಯನ್ನು ಪೆÇ್ರೀತ್ಸಾಹಿಸುವುದುಇತ್ಯಾದಿ.
ಹಾಗೆಯೇ ಸಂಘದ ವತಿಯಿಂದ ಮೈಸೂರು ತಾಲ್ಲೂಕು ವ್ಯಾಪ್ತಿಗೊಳಪಟ್ಟ ವರುಣಾ, ವಾಜಮಂಗಲ ಮತ್ತು ವರಕೋಡು ಗ್ರಾಮಗಳ ವಿವಿಧ ಸರ್ವೇನಂಬರ್‍ಗಳಲ್ಲಿ ಸುಮಾರು1 44.09 ಎಕರೆ ಜಮೀನನ್ನು ಖರೀದಿಸಿ 136 ಎಕರೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಿಂದ ಭೂಪರಿವರ್ತನೆ ಆದೇಶ ಪಡೆದು 134 ಎಕರೆ ಪ್ರದೇಶದ ನಕ್ಷೆಗೆ ನಗರ ಯೋಜನಾ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದ್ದು, ನಿವೇಶನಗಳಾಗಿ ಪರಿವರ್ತನೆಗೊಳಸಿ ಬಡಾವಣೆಯ ಸಮಗ್ರ ನೀಲ ನಕ್ಷೆಯನ್ನು ತಯಾರಿಸಲಾಗಿದೆ. ನಾಗರೀಕ ಸೌಲಭ್ಯ ನಿವೇಶನಗಳು, ಪಾರ್ಕ್‍ಗಳು, ರಸ್ತೆಗಳು ಇತ್ಯಾದಿಗಳನ್ನು ಸರ್ಕಾರಕ್ಕೆ ಪರಿತ್ಯಜನಾ ಪತ್ರದ ಮೂಲಕ ನೋಂದಣಿ ಮಾಡಿಕೊಡಲಾಗಿದೆ.
ವರುಣ ಕೆರೆಯ ಪೂರ್ವದಿಕ್ಕಿನಲ್ಲಿ ಟಿ.ನರಸೀಪುರ ರಸ್ತೆಗೆ ಸೇರಿದಂತೆ ಇರುವ ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳ ನಗರದ ಬಡಾವಣೆಯಲ್ಲಿ ಲಭ್ಯವಿರುವ ಒಟ್ಟು 1375 ವಿವಿಧ ಅಳತೆಯ ನಿವೇಶನಗಳನ್ನು ರಚಿಸಿ ಸಂಘದಲ್ಲಿ ಮುಂಗಡ ಪಾವತಿಸಿ, ಸಹಕಾರ ಇಲಾಖೆಯಿಂದ ಜೇಷ್ಠತಾ ಪಟ್ಟಿ ಅನುಮೋದನೆ ಪಡೆದಿರುವ ಎಲ್ಲಾ ಸದಸ್ಯರುಗಳಿಗೂ ಲಾಭ ಪಡೆಯದೆ ಈ ಹಿಂದೆ ನಿಗಧಿಪಡಿಸಿದ ದರದಂತೆ ಹಂಚಿಕೆ ಮಾಡಲಾಗಿದೆ. ಸಂಘದಲ್ಲಿ ಹಾಲಿ 1381 ಸದಸ್ಯರು ಹಾಗೂ 307 ಸಹಸದಸ್ಯರು ಇರುತ್ತಾರೆ.
ಹಾಗೆಯೇ ಜೆಎಸ್‍ಎಸ್ ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿಮಾಣ ಸಹಕಾರ ಸಂಘದಿಂದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ ವಿವಿಧ ಸಮಾರಂಭಗಳನ್ನು ನಡೆಸಲು ಅನುಕೂಲವಾಗುವಂತೆ ಅಂದಾಜು 7.5 ಕೋಟಿ ರೂ.ವೆಚ್ಚದಲ್ಲಿ ಸುವ್ಯವಸ್ಥಿತವಾದ ಡಾ. ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳವರ ಅನುಭವ ಮಂಟಪ ಸಭಾಭವನವನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಬಡಾವಣೆಯ ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿರುವ ಅನುಭವ ಮಂಟಪವು, ಗಣಪತಿ ದೇವಸ್ಥಾನ, ಸಭಾಂಗಣ, ಕೊಠಡಿಗಳು, ಅತ್ಯುತ್ತಮ ಧ್ವನಿ ವ್ಯವಸ್ಥೆ, ಲಿಫ್ಟ್, ಭೋಜನ ಶಾಲೆ, ಪಾಕ ಶಾಲೆ ಹಾಗೂ ವಿಶಾಲವಾದ ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಹೊಂದಿದೆ. ಸದರಿ ಅನುಭವ ಮಂಟಪವು ವಿವಿಧ ಸಭೆ ಸಮಾರಂಭಗಳಿಗಾಗಿ ಸಾರ್ವಜನಿಕರಿಗೂ ಸಹ ಲಭ್ಯವಾಗಲಿದೆ. ಈ ಅನುಭವ ಮಂಟಪವು ಮುಂದಿನ ಪೀಳಿಗೆಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಾಗಿದೆ.
ಸದರಿ ಅನುಭವ ಮಂಟಪವನ್ನು ಪರಮ ಪೂಜ್ಯಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಇದೇ ಸಮಯದಲ್ಲಿ ಸಂಘದ ಕಛೇರಿಯನ್ನು ಸಮಾಜಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರು ಹಾಗೂ ಕೊಡಗು ಲೋಕಸಭಾ ಸದಸ್ಯ ಯದುವೀರ್‍ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರ ಲೋಕಸಭಾ ಸದಸ್ಯ ಸುನೀಲ್‍ಬೋಸ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ. ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಂಜುಂಡಪ್ಪ, ಕಾರ್ಯದರ್ಶಿ ರಾಜಶೇಖರಮೂರ್ತಿ, ನಿರ್ದೇಶಕರುಗಳಾದ ಮಲ್ಲಿಕಾರ್ಜುನಸ್ವಾಮಿ ದುಗ್ಗಟ್ಟಿ, ಸ್ವಾಮಿ ಭಾಗವಹಿಸಿದ್ದರು.


























