ನಾಳೆಯಿಂದ ಅಮುಲ್ ಉತ್ಪನ್ನಗಳ ದರ ಇಳಿಕೆ

ನವದೆಹಲಿ, ಸೆ.೨೧- ಅಮುಲ್ ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಿರುವ ಹಿನ್ನೆಲೆ ನಾಳೆಯಿಂದ(ಸೆ.೨೨) ತುಪ್ಪ, ಬೆಣ್ಣೆ ಐಸ್ ಕ್ರೀಮ್, ಬೇಕರಿ ಮತ್ತು ಫ್ರೋಜನ್ ಪದಾರ್ಥಗಳು ಸೇರಿದಂತೆ ೭೦೦ಕ್ಕೂ ಹೆಚ್ಚು ಉತ್ಪನ್ನಗಳ ಪ್ಯಾಕ್‌ಗಳ ಮೇಲಿನ ಬೆಲೆ ತಗ್ಗಲಿದೆ.


ಬೆಣ್ಣೆ, ತುಪ್ಪ, ಯುಎಚ್‌ಟಿ ಹಾಲು ಮತ್ತು ಐಸ್ ಕ್ರೀಮ್‌ನಂತಹ ಡೈರಿ ಅಗತ್ಯ ವಸ್ತುಗಳು ಹಾಗೂ ಬೇಕರಿ ವಸ್ತುಗಳು ಮತ್ತು ಫ್ರೋಜನ್ ತಿಂಡಿಗಳು ಸೇರಿದಂತೆ ಅಮುಲ್ ಉತ್ಪನ್ನಗಳ ಬೆಲೆ ಕಡಿತವಾಗಲಿದೆ. ಚೀಸ್, ಪನೀರ್, ಚಾಕೊಲೇಟ್‌ಗಳು, ಮಾಲ್ಟ್ ಆಧಾರಿತ ಪಾನೀಯಗಳು ಮತ್ತು ಕಡಲೆಕಾಯಿ ಸ್ಪ್ರೆಡ್‌ನಂತಹ ಇತರ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿದೆ. ಈ ಬೆಲೆ ಕಡಿತವು ಅಮುಲ್ ಬೆಣ್ಣೆಯ (೧೦೦ ಗ್ರಾಂ) ಎಂಆರ್ ಪಿ ಅನ್ನು ಒಳಗೊಂಡಿದೆ. ಇದನ್ನು ೬೨ ರೂ.ನಿಂದ ೫೮ ರೂ.ಗೆ ಇಳಿಸಲಾಗುವುದು ಎಂದು ಒಕ್ಕೂಟ ಹೇಳಿದೆ.


ಜಿಎಸ್ ಟಿ ಕಡಿತದ ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ನಿರ್ಧಾರವು ಉತ್ತಮ ಗುಣಮಟ್ಟದ ಡೈರಿ ಮತ್ತು ಆಹಾರ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುವ ತನ್ನ ಬದ್ಧತೆಗೆ ಅನುಗುಣವಾಗಿದೆ ಎಂದು ಒತ್ತಿ ಹೇಳಿದೆ. ೭೦೦ ಕ್ಕೂ ಹೆಚ್ಚು ಉತ್ಪನ್ನಗಳ ಬೆಲೆಗಳನ್ನು ಕ

ಡಿಮೆ ಮಾಡುವ ಮೂಲಕ, ಅಮುಲ್ ಉತ್ಪನ್ನಗಳು ಕೈಗೆಟುಕುವ ಬೆಲೆ ನೀಡುತ್ತಿದೆ. ಕೆಎಂಎಫ್ ಸಹ ಡೈರಿ ಉತ್ಪನ್ನಗಳ ಮೇಲಿನ ಬೆಲೆಯನ್ನು ಕಡಿಮೆ ಮಾಡಿದೆ.
೧೦೦೦ ಮಿಲಿ ಲೀಟರ್ ತುಪ್ಪ ಹಳೆಯ ದರ ೬೫೦ ಇದ್ದರೆ, ಹೊಸ ದರ ೬೧೦ ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇನ್ನು ೫೦೦ ಮಿಲಿ ಲೀಟರ್ ಬೆಣ್ಣೆ ಹಳೆಯ ದರ ೩೦೬ ಇದ್ದರೆ ಹೊಸದರ ೨೮೬ ರೂಪಾಯಿ ಇದೆ. ಇನ್ನು ೧೦೦೦ ಗ್ರಾಮ ಪನೀರ್ ಹಳೆಯ ದರ ೪೨೫ ಇದ್ದರೆ, ಹೊಸ ದರ ೪೦೮ ರೂಪಾಯಿ ಇದೆ.


ಒಂದು ಲೀಟರ್ ಗುಡ್ ಲೈಫ್ ಹಾಲು, ಹಳೆಯ ದರೆ ರೂ.೭೦ ಇದ್ದರೆ, ಹೊಸದರ ೬೮ ರೂಪಾಯಿ ಇದೆ. ಚೀಸ್ ಒಂದಕ್ಕೆ ಹಳೆಯದರ ೪೮೦ ಇದ್ದರೆ ಹೊಸದರ ೪೫೦ ರೂಪಾಯಿಗೆ ಇಳಿಕೆ ಮಾಡಲಾಗಿದೆ. ಸಂಸ್ಕರಿಸಿದ ಚೀಸ್ ಹಳೆಯದರ ೫೩೦ ಇದ್ದರೆ ಹೊಸದರ ೪೯೭ಕ್ಕೆ ಇಳಿಕೆ ಮಾಡಲಾಗಿದೆ.ಇನ್ನು ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡುವ ವಿಚಾರವಾಗಿ ಹಾಲು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಲಿನ ಉತ್ಪನ್ನಗಳಿಗೆ ಮಾತ್ರ ದರ ಇಳಿಕೆ ಮಾಡಲಾಗಿದೆ.