
ಸಂಜೆವಾಣಿ ನ್ಯೂಸ್
ಮೈಸೂರು: ಮೇ.30:- ಮುತ್ತತ್ತಿ ನದಿಯಲ್ಲಿ ಮೈಸೂರಿನ ಕೆ.ಆರ್.ಕ್ಷೇತ್ರದ ಕನಕಗಿರಿಯ ನಾಲ್ವರು ಮಕ್ಕಳು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಹಿನ್ನೆಲೆಯಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರು ಮೃತರ ಕುಟುಂಬಕ್ಕೆ ಪರಿಹಾರ ನೀಡಿದರು.
ಘಟನೆಯಲ್ಲಿ ಮೃತಪಟ್ಟ ನಾಲ್ವರು ಮಕ್ಕಳ ಕುಟುಂಬದವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮೂಲಕ ಪರಿಹಾರ ಕಲ್ಪಿಸಲು ಕ್ರಮವಹಿಸಿದ ಎಂ.ಕೆ.ಸೋಮಶೇಖರ್ ಅವರು, ಮೃತಪಟ್ಟ ನಾಲ್ಕು ಮಕ್ಕಳುಗಳ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಗುರುವಾರ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಅವರ ಕಚೇರಿಯಲ್ಲಿ ಮೃತಪಟ್ಟ ನಾಲ್ವರು ಮಕ್ಕಳ ಕುಟುಂಬಕ್ಕೆ ಹಣ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್, ಮಳೆಗಾಲದಲ್ಲಿ ನದಿಗಳು, ಕೆರೆಗಳು, ಕಾಲುವೆಗಳು ತುಂಬಿರಲಿದ್ದು, ನಾನಾ ಕಾರಣಗಳಿಗೆ ಮಕ್ಕಳನ್ನು ನದಿ, ಕಾಲುವೆ ಅಥವಾ ಇನ್ನಿತರ ಕಡೆಗಳಿಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ಮಕ್ಕಳ ಚಲನವಲನಗಳ ಬಗ್ಗೆ ಪೆÇೀಷಕರು ಹೆಚ್ಚಿನ ನಿಗಾವಹಿಸಿ ಯಾವುದೇ ಅನಾಹುತಗಳು ಆಗದಂತೆ ಎಚ್ಚರಿಕೆವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ವಾರ್ಡ್ ಅಧ್ಯಕ್ಷ ಕೇಬಲ್ ಮಹದೇವು, ಆಶ್ರಯ ಸಮಿತಿ ಸದಸ್ಯ ಗುಣಶೇಖರ್, ಮಹಮ್ಮದ್ ಫಾರೂಖ್, ಕಾಂಗ್ರೆಸ್ ಮುಖಂಡರಾದ ಸಿದ್ದು, ಹರೀಶ್ ಗಂಧನಹಳ್ಳಿ, ಮಂಜುನಾಥ್, ಮಧುರಾಜ್, ನಾಗ ಮಹದೇವ ಇತರರಿದ್ದರು.