ನಾಲ್ಕು ಚಿತ್ರಗಳಿಗೆ ಭಾರ್ಗವ ನಾಯಕ

ಯಶಸ್ವಿ ’ಟೆಡ್ಡಿ ಬೇರ್’ ಚಿತ್ರದ ಮೂಲಕ ನಾಯಕನಾಗಿ ಪರಿಚಯಗೊಂಡ ‘ಭಾರ್ಗವ’ ಸದ್ಯ ಐದು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ’ಸುಡೋಕು’ ’ವಿದುರ’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ’ವಿಕ್ರಮಾರ್ಕ’ ಅಂತಿಮ ಹಂತದ ಶೂಟಿಂಗ್ ಬಾಕಿ ಇದೆ.

’ರಾಜ ದೇವ ಸಿಂಧು’ ಮತ್ತು ’ಆ..ಈ..’ ಚಿತ್ರಗಳು ಶೀಘ್ರದಲ್ಲೇ ಚಿತ್ರೀಕರಣ ನಡೆಸಲು ಸಜ್ಜಾಗಿದೆ. ಇದರ ಕುರಿತಂತೆ ಮಾತನಾಡುತ್ತಾ, ನಾನು ಎಲ್ಲಾ ವಿಧದ ಪಾತ್ರಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಹೊಸ ಕಥಾಹಂದರ, ವಿಭಿನ್ನ ಕಂಟೆಂಟ್ ಇರುವ ಸಿನಿಮಾಗಳಿಗೆ ಮೊದಲು ಆದ್ಯತೆ ಕೊಡುತ್ತೇನೆ. ಕಾಲೇಜು ದಿನಗಳಲ್ಲೆ ಕಥೆ ಬರೆಯುವ ಹವ್ಯಾಸ ಹೊಂದಿದ್ದು, ಆದರ್ಶ ವ್ಯಕ್ತಿ ಪವರ್ ಸ್ಟಾರ್ ಪುನೀತ್‌ರಾಜ್ ನನಗೆ ಸ್ಪೂರ್ತಿಯಾಗಿದ್ದಾರೆ.

ಪ್ರತಿ ಹುಟ್ಟುಹಬ್ಬದಂದು ಧರ್ಮಸ್ಥಳ ಮತ್ತು ಕೈವಾರ ತಾತಯ್ಯನ ದೇವಸ್ಥಾನಗಳಿಗೆ ಭೇಟಿ ನೀಡುವುದು ರೂಡಿಯಾಗಿದೆ. ಭವಿಷ್ಯದಲ್ಲಿ ವೃದ್ದಾಶ್ರಮ, ಅನಾಥಶ್ರಮಗಳನ್ನು ಸ್ಥಾಪಿಸುವ ಉದ್ದೇಶವಿದೆ. ವಿಕ್ರಮಾರ್ಕ 2025ರ ಹಿಟ್ ಹಾಡುಗಳು ಆಗುತ್ತದೆಂಬ ನಂಬಿಕೆ ಇದೆ. ಟಾಲಿವುಡ್‌ನಿಂದ ಕರೆ ಬಂದಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಎಲ್ಲವೂ ದೃಢವಾದ ನಂತರ ತಿಳಿಸುತ್ತೇನೆ. ಏನೇ ಆದರೂ ಕನ್ನಡ ಚಿತ್ರರಂಗ ಎಂದಿಗೂ ಮರೆಯಲಾರೆ ಎನ್ನುತ್ತಾರೆ ಭಾರ್ಗವ.