ನಾರ್ಥ್ ಈಸ್ಟ್ ಕಾಲಿಂಗ್ ಕಾರ್ಯಕ್ರಮ ಉದ್ಘಾಟನೆ

ಸಂಜೆವಾಣಿ ನ್ಯೂಸ್
ಮೈಸೂರು.ನ.17:-
ನಾರ್ಥ್ ಈಸ್ಟ್ ಕಾಲಿಂಗ್'' ಕಾರ್ಯಕ್ರಮವು ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಕರ್ನಾಟಕ ಪ್ರಾಂತ ಮತ್ತು ಭಾರತೀಯ ಭಾಷಾ ಸಂಸ್ಥಾನದ (ಭಾ.ಭಾ.ಸಂ.) ದ ಸಹಯೋಗದಲ್ಲಿ ಭಾ.ಭಾ.ಸಂ ದಲ್ಲಿ ನೆರವೇರಿತು. 2025ರ ನವೆಂಬರ್ 16ರಂದು, ಭಾನುವಾರ, ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಕರ್ನಾಟಕ ಪ್ರಾಂತವು ಭಾ.ಭಾ.ಸಂ. ಸಹಯೋಗದಲ್ಲಿ ಆಯೋಜಿಸಿದ್ದನಾರ್ಥ್‍ಈಸ್ಟ್ ಕಾಲಿಂಗ್” ಕಾರ್ಯಕ್ರಮವು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ (ಭಾ.ಭಾ.ಸಂ.)ದಲ್ಲಿ ಜರುಗಿತು.


ಕಾರ್ಯಕ್ರಮವನ್ನು ಮಾನನೀಯ ನಿವೇದಿತಾ ಭಿಡೆ, ಉಪಾಧ್ಯಕ್ಷರು, ವಿವೇಕಾನಂದ ಶಿಲಾ ಸ್ಮಾರಕ ಹಾಗೂ ವಿವೇಕಾನಂದ ಕೇಂದ್ರ, ಕನ್ಯಾಕುಮಾರಿಇವರು ಉದ್ಘಾಟಿಸಿದರು; ಪೆÇ್ರ. ಶೈಲೆಂದ್ರ ಮೋಹನ್, ನಿರ್ದೇಶಕರು, ಭಾರತೀಯ ಭಾಷಾ ಸಂಸ್ಥಾನ; ಮತ್ತು ಡಾ. ಆರ್. ಬಾಲಸುಬ್ರಹ್ಮಣಿಯನ್, ಸದಸ್ಯರು, ಮಾನವ ಸಂಪನ್ಮೂಲ ಸಾಮಥ್ರ್ಯ ನಿರ್ಮಾಣ ಆಯೋಗದ ಸದಸ್ಯರು ಹಾಗೂ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ಮೈಸೂರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.