ನಾಪತ್ತೆಯಾಗಿರುವ ಚೀಟಿ ವೆಂಕಟೇಶ್ ಪತ್ತೆಗೆ ನೊಂದವರ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:
ಕಳೆದ 15 ದಿನಗಳಿಂದ ನಾಪತ್ತೆಯಾಗಿರುವ ಹಾವಂಬಾಯಿ ಪ್ರದೇಶದ  ನಿವಾಸಿ ಚೀಟಿ ವೆಂಕಟೇಶ್ ಪತ್ತೆಗೆ. ಆತನ ಬಳಿ ಚೀಟಿ ಹಾಕಿ ನೊಂದಿರುವ ಜನತೆ ಇಂದು ಬ್ರೂಸ್ ಪೇಟೆ ಠಾಣೆ ಬಳಿಗೆ ಬಂದು ಅಲ್ಲಿಂದ ಎಸ್ಪಿ ಕಚೇರಿಗೆ ತೆರಳಿ ಮನವಿ ಮಾಡಿದ್ದಾರೆ.‌
ನಾಪತ್ತೆಯಾಗಿರುವ ವೆಂಕಟೇಶ್ ಹಲವಾರು ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದ. ಲಕ್ಷಾಂತರ ರೂಗಳ ಚೀಟಿ ಹಾಕುತ್ತಿದ್ದ. ನಗರದಲ್ಲಿ ಬಹುತೇಕ ವ್ಯಾಪಾರಿಗಳು, ವೈದ್ಯರು, ಅಂಗಡಿ ಮುಂಗಟ್ಟುಗಳ ಮಾಲೀಕರು, ಸಾರ್ವಜನಿಕರು ಪ್ರತಿ ತಿಂಗಳು ಚೀಟಿ ವ್ಯವಹಾರ ಮಾಡಿದ್ದರು.
ಕೋಟ್ಯಾಂತರ ರೂ ಗಳ ಚೀಟಿ ವ್ಯವಹಾರ ಈತನದಾಗಿತ್ತು. ಆದರೆ ಈತ ಜ.30 ರಂದು ರಾತ್ರಿ ನಗರದ ಬೆಂಗಳೂರು ರಸ್ತೆಯ ಹೆಚ್.ಎಲ್.ಸಿ.ಕಾಲುವೆ ಬಳಿ ತನ್ನ ಬೈಕ್ ಬಿಟ್ಟು, ಅದರಲ್ಲಿ ತನ್ನ ಎರೆಡು ಮೊಬೈಲ್ ಇಟ್ಟು ನಾಪತ್ತೆಯಾ ಗಿದ್ದಾನೆ.
ಮನೆಯವರು ಈತನ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈತ ಪೂರ್ವ ನಿರ್ಧಾರಿತನಾಗಿ ಐಪಿ ಇಟ್ಟು ಜನರಿಗೆ ವಂಚನೆ ಮಾಡಿ ತಲೆ ಮರೆಸಿಕೊಂಡಿದ್ದಾನೆ ಆತನನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ‌