
ವಾಷಿಂಗ್ಟನ್,ಜ.12– ವೆನೆಜುವೆಲಾ ಮೇಲೆ “ದೊಡ್ಡ ಪ್ರಮಾಣದ” ಮಿಲಿಟರಿ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಪೋಲೀರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್‍ಗೆ ಕರೆತಂದ ವಾರಗಳ ನಂತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಚ್ಚರಿಯ ಹೇಳಿಕೆ ಹೊರಬಿದ್ದಿದ್ದು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ವೆನಿಜುವೆಲಾಗೆ ನಾನೇ ಹಂಗಾಮಿ ಅಧ್ಯಕ್ಷ” ಎಂದು ಬಣ್ಣಿಸಿಕೊಂಡಿದ್ದು, ತೈಲ ಸಮೃದ್ಧ ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ವಾಷಿಂಗ್ಟನ್‍ನ ಪಾತ್ರದ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
“ವೆನಿಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಂಡವರು” ಎಂಬ ಪದನಾಮದೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಭಾವಚಿತ್ರ ಒಳಗೊಂಡಿರುವ ಮಾಹಿತಿ ಹಂಚಿಕೊಂಡಿದ್ದಾರೆ
ಅಮೆರಿಕಾದ 45 ಮತ್ತು 47ನೇ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಇದೀಗ ವೆನಿಜುವೆಲಾಗೆ ಹಂಗಾಮಿ ಅಧ್ಯಕ್ಷರಾಗಿದ್ದು ಅಧಿಕಾರ ವಹಸಿಕೊಂಡಿದ್ದೇನೆ, ತಮ್ಮ ಮಾರ್ಗದರ್ಶನದಲ್ಲಿ ವೆನುಜುವೆಲಾ ನಡೆಯಲಿದೆ ಎಂದು ತಿಳಿಸಿದ್ಧಾರೆ.
ಅಮೆರಿಕಾ, ವೆನಿಜುವೆಲಾದಲ್ಲಿ “ದೊಡ್ಡ ಪ್ರಮಾಣದ” ಮಿಲಿಟರಿ ದಾಳಿ ನಡೆಸಿದ ವಾರಗಳ ನಂತರ ಈ ಅಸಾಮಾನ್ಯ ಹೇಳಿಕೆ ಬಂದಿದೆ. ಕಾರ್ಯಾಚರಣೆಯ ಸಮಯದಲ್ಲಿ, ವೆನಿಜುವೆಲಾದ ನಾಯಕ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಪೋಲೀರ್ಸ್ ಅವರನ್ನು ಸೆರೆಹಿಡಿದು ನ್ಯೂಯಾರ್ಕ್‍ಗೆ ಸಾಗಿಸಲಾಗಿತ್ತು. ಇಬ್ಬರೂ ಮಾದಕ ದ್ರವ್ಯ-ಭಯೋತ್ಪಾದನಾ ಪಿತೂರಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
“ಸುರಕ್ಷಿತ, ಸರಿಯಾದ ಮತ್ತು ನ್ಯಾಯಯುತ ಪರಿವರ್ತನೆ” ಸಾಧಿಸುವವರೆಗೆ ಅಮೆರಿಕ ವೆನಿಜುವೆಲಾದ ಆಡಳಿತವನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ
ನಿಕೋಲಾಸ್ ಮಡುರೊ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ ನಂತರ, ವೆನಿಜುವೆಲಾದ ಉಪಾಧ್ಯಕ್ಷ ಮತ್ತು ತೈಲ ಸಚಿವ ಡೆಲ್ಸಿ ರೊಡ್ರಿಗಸ್ ಕಳೆದ ವಾರ ದೇಶದ ಮಧ್ಯಂತರ ಅಧ್ಯಕ್ಷರಾಗಿ ಔಪಚಾರಿಕವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಧ್ಯಂತರ ಅಧಿಕಾರಿಗಳು “ಉತ್ತಮ ಗುಣಮಟ್ಟದ, ಅನುಮೋದಿತ ತೈಲ” ಎಂದು ವಿವರಿಸಿದ 30 ರಿಂದ 50 ಮಿಲಿಯನ್ ಬ್ಯಾರೆಲ್‍ಗಳನ್ನು ಅಮೆರಿಕಾಕ್ಕೆ ಹಸ್ತಾಂತರಿಸುತ್ತಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.




























