ನಾಣಿಕೇರಿ ಟ್ರಸ್ಟ್ ವತಿಯಿಂದ ಕಾಮ ದಹನ ಕಾರ್ಯಕ್ರಮ

ಸಂಜೆವಾಣಿ ವಾರ್ತೆ,

ಮರಿಯಮ್ಮನಹಳ್ಳಿ, ಮಾ.04: ಪಟ್ಟಣದ ನಾಣಿಕೇರಿ ಯುವ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ರತಿ ಕಾಮ ದಹನ ಮಾಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಲೊಂದಿಗೆ ಪಟ್ಟಣದ ಯುವ ಸಮೂಹ ಹಲಗೆ ವಾದ್ಯದೊಂದಿಗೆ ಕುಣಿದು ಸಂಭ್ರಮಿಸಿದರು. ಅಲ್ಲದೇ ಮಂಗಳವಾರ ರಾತ್ರಿ ಕಾಮನ ಭಾವಚಿತ್ರವನ್ನು ದಹಿಸಿ ಕಾಮದಹನ ಮಾಡಿದರು.

ಬ್ರಾಹ್ಮಣ ಸಮುದಾಯದ ವತಿಯಿಂದ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಹಾಗೂ ವಾಲ್ಮೀಕಿ ಸಮುದಾಯದ ವತಿಯಿಂದ ಕಾಮ ದಹನ ಮಾಡಲಾಯಿತು.

ಬುಧವಾರದ ಬೆಳಿಗ್ಗೆಯಿಂದಲೇ ಸರ್ವ ಧರ್ಮದ ಯುವಕರು, ಚಿಣ್ಣರು ಹಾಗೂ ನಾಗರಿಕರು ಸೇರಿ ಪಟ್ಟಣದಾದ್ಯಂತ ಪರಸ್ಪರ ಬಣ್ಣ ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದರು.